ADVERTISEMENT

100 ಕ್ವಿಂಟಲ್ ರಾಗಿ ಬೆಳೆದ ಮಠಾಧೀಶರು

‘ರೈತರಿಗೆ ಸರ್ಕಾರದ ಪ್ರೋತ್ಸಾಹ ಬೇಕು’

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 19:21 IST
Last Updated 6 ಫೆಬ್ರುವರಿ 2019, 19:21 IST
ರಾಗಿ ರಾಶಿ ಮಾಡಿರುವುದು
ರಾಗಿ ರಾಶಿ ಮಾಡಿರುವುದು   

ದಾಬಸ್‌ಪೇಟೆ: ‘ಉತ್ತು ಬಿತ್ತಿ ಬೆವರಿಳಿಸಿ ಭೂತಾಯಿಯ ಸೇವೆ ಮಾಡಿದರೆ ಒಳ್ಳೆಯ ಫಸಲು ಬೆಳೆಯಬಹುದು’ ಎಂಬುದನ್ನು ಶಿವಗಂಗೆಯ ಹೊನ್ನಮ್ಮ ಗವಿಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ತೋರಿಸಿದ್ದಾರೆ.

ಸ್ವಾಮೀಜಿ ಪ್ರತಿ ವರ್ಷವೂ ಮಠದ ಜಮೀನಿನಲ್ಲಿ ರಾಗಿ ಬೆಳೆಯುತ್ತಾರೆ. ಈ ವರ್ಷ 10 ಎಕರೆ ಭೂಮಿಯಲ್ಲಿ ನೂರು ಕ್ವಿಂಟಲ್‌ಗೂ ಹೆಚ್ಚು ಫಸಲು ತೆಗೆದಿದ್ದಾರೆ. 30X14 ಅಡಿ ವಿಸ್ತೀರ್ಣದ ಎರಡು ಹುಲ್ಲಿನ ಬಣವೆಗಳನ್ನೂ ಸ್ವಾಮೀಜಿ ನಿರ್ಮಿಸಿದ್ದಾರೆ.

ಎಂಆರ್‌–1 ಮತ್ತು ಎಂಆರ್‌ – 2 ತಳಿಗಳನ್ನು ಬಿತ್ತಿದ್ದೆವು ಎಂದು ಸ್ವಾಮೀಜಿ ಹೇಳಿದರು.

ADVERTISEMENT

ದಾಬಸ್‌ಪೇಟೆ ಕೈಗಾರಿಕಾ ಪ್ರದೇಶ. ಯುವಜನರು ವ್ಯವಸಾಯದಿಂದ ಹಿಂದೆ ಸರಿಯುತ್ತಿದ್ದಾರೆ. ಇಲ್ಲಿ ರಾಗಿಯೇ ಪ್ರಮುಖ ಬೆಳೆ. ಇರುವ ಒಂದಷ್ಟು ಭೂಮಿಯನ್ನು ಪಾಳು ಬಿಡುತ್ತಿದ್ದಾರೆ. ಸರ್ಕಾರ ಉಳಿದ ಭೂಮಿಯಲ್ಲಾದರೂ ರೈತರು ರಾಗಿ ಬೆಳೆಯುವುದಕ್ಕೆ ಪ್ರೋತ್ಸಾಹ ಹಾಗೂ ಬೆಳೆಗೆ ಬೆಂಬಲ ಬೆಲೆ ನೀಡಬೇಕು ಎಂದು ಅವರು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.