ADVERTISEMENT

ಹುಲಿ ಮದುವೆ ಮಾಡಬೇಕೆ?

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 19:19 IST
Last Updated 6 ಜುಲೈ 2018, 19:19 IST

ಬೆಂಗಳೂರು: ‘ಹುಲಿಗಳನ್ನು ಅರಣ್ಯದಿಂದ ಏಕೆ ಹೊರಗೆ ಬಿಡುತ್ತೀರಿ. ನೀವು ಅವುಗಳನ್ನು ಅರಣ್ಯದಲ್ಲೇ ಕಂಟ್ರೋಲ್‌ ಮಾಡದಿದ್ದರೆ ಜನ ಹುಲಿಗಳ ಮದುವೆ ಮಾಡುತ್ತಾರೆ’

–ಹೀಗೆಂದು ವಿಧಾನಸಭೆಯಲ್ಲಿ ಶುಕ್ರವಾರ ಅರಣ್ಯ ಸಚಿವರಿಗೆ ಎಚ್ಚರಿಸಿದವರು ಬಿಜೆಪಿಯ ಕೆ.ಜಿ.ಬೋಪಯ್ಯ. ‘ಈ ಕಾಡುಪ್ರಾಣಿಗಳನ್ನು ಗುಂಡಿಕ್ಕಿ ಕೊಲ್ಲುವುದಕ್ಕೆ ನಮ್ಮಲ್ಲಿ ಹುಲಿಗಳ ಮದುವೆ ಅಂತಾರೆ ಗೊತ್ತೆ’ ಎಂದೂ ಕೇಳಿದರು.

‘ಕೊಡಗಿನಲ್ಲಿ ವನ್ಯಜೀವಿಗಳ ಹಾವಳಿ ಹೆಚ್ಚಾಗಿದ್ದು, ನಿಯಂತ್ರಣಕ್ಕೆ ತರಬೇಕು. ಅವುಗಳ ದಾಳಿಗೆ ತುತ್ತಾದವರಿಗೆ ಸೂಕ್ತ ಪರಿಹಾರವನ್ನೂ ಕೊಡಬೇಕು’ ಎಂದು ಒತ್ತಾಯಿಸಿದರು. ಬಿಜೆಪಿಯ ಅಪ್ಪಚ್ಚು ರಂಜನ್‌, ‘ನಮ್ಮ ಭಾಗದಲ್ಲಿ ಕಾಡುಪ್ರಾಣಿಗಳು ಕುರಿಗಳು ಬಂದ್ಹಂಗೆ ಬರ್ತವೆ. ಸೌರಬೇಲಿ ಹಾಕಿ ಅವುಗಳನ್ನು ಕಾಡಿನಿಂದ ಹೊರಬರದಂತೆ ತಡೆಯಿರಿ’ ಎಂದು ಆಗ್ರಹಿಸಿದರು.‌

ADVERTISEMENT

‘ಅರಣ್ಯ ಸಚಿವರು ಇತ್ತೀಚೆಗೆ ಕೊಡಗಿಗೆ ಭೇಟಿ ನೀಡಿದ್ದು ಅಧಿಕೃತವೋ ಅನಧಿಕೃತವೋ’ ಎಂದು ಅದೇ ಪಕ್ಷದ ಸಿ.ಟಿ.ರವಿ ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.