ಬೆಂಗಳೂರು: ಮಲ್ಲೇಶ್ವರದ 11ನೇ ಅಡ್ಡರಸ್ತೆಯಲ್ಲಿ ನೂತನವಾಗಿ ಆರಂಭಿಸಿರುವ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ 7ನೇ ಮಳಿಗೆಯನ್ನು ಚಿತ್ರನಟ ಸುದೀಪ್ ಅವರು ಗುರುವಾರ ಉದ್ಘಾಟಿಸಿದರು.
ವಿಧಾನ ಪರಿಷತ್ ಸದಸ್ಯರೂ ಆಗಿರುವ ಸಾಯಿ ಗೋಲ್ಡ್ ಪ್ಯಾಲೇಸ್ ಮುಖ್ಯಸ್ಥ ಟಿ.ಎ.ಶರವಣ ಮಾತನಾಡಿ, ‘ದಿನದಿಂದ, ದಿನಕ್ಕೆ ಚಿನ್ನದ ದರ ಹೆಚ್ಚಳವಾಗುತ್ತಿದೆ. ಚಿನ್ನ ಮನೆಯಲ್ಲಿ ಇದ್ದರೆ ಸಂಕಷ್ಟದ ಕಾಲದಲ್ಲಿ ಕೈಹಿಡಿಯುವ ಅಮೂಲ್ಯ ವಸ್ತು. ಮದುವೆ, ಶುಭ ಸಮಾರಂಭಗಳಿಗೆ ಚಿನ್ನಾಭರಣ ಧರಿಸಲು ವಿಶಿಷ್ಟ, ವಿನ್ಯಾಸದ ಅಭರಣ, ವಜ್ರದ ಆಭರಣಗಳು ಲಭ್ಯವಿವೆ. ದುಬೈ ದರದಲ್ಲಿ ಚಿನ್ನ ಮಾರಾಟ ಸೇರಿ ಅತ್ಯಾಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿದೆ’ ಎಂದು ಹೇಳಿದರು.
ವಿನಯ್ ಗುರೂಜಿ ಅವರ ಸಾನ್ನಿಧ್ಯ ವಹಿಸಿದ್ದರು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಶಾಸಕ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ , ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್, ಎಡಿಜಿಪಿ ವಿ.ರಾಜ್ ಕುಮಾರ್, ಆರ್.ಪಿ ರವಿಶಂಕರ್ , ಸತ್ಯನಾರಾಯಣ, ನಟಿ ಪ್ರೇಮಾ, ಗಾಯಕ ಚಂದನ್ ಶೆಟ್ಟಿ , ಕಲಾವಿದರಾದ ಅನುಷಾ ರೈ, ಐಶ್ವರ್ಯ ಸಿಂಧೋಗಿ, ಶಿಶಿರ್ ಶಾಸ್ತ್ರಿ ಅವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.