
ರಾಜರಾಜೇಶ್ವರಿನಗರ: ಜಗತ್ತಿನಲ್ಲಿ ನೆಮ್ಮದಿ, ಶಾಂತಿ ಕಾಣಬೇಕಾದರೆ ತಂದೆ- ತಾಯಿ, ಒಡಹುಟ್ಟಿದವರು, ಹಿರಿಯರ ಜೊತೆ ಕೂಡಿ ಬಾಳುವ ಕೆಲಸ ಮಾಡಬೇಕು. ಆಗ ನೆಮ್ಮದಿಯ ಜೀವನ ಕಾಣಬಹುದು ಎಂದು ಶೃಂಗೇರಿ ಮಠದ ವಿಧುಶೇಖರ ಭಾರತಿ ಸ್ವಾಮೀಜಿ ಹೇಳಿದರು.
ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆಯ ಎಂಟನೇ ಬ್ಲಾಕ್‌ನಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಕಾರ್ಯಸಿದ್ಧಿ ವಿನಾಯಕ ಸ್ವಾಮಿ ಪ್ರತಿಮೆ ಪುನರ್ ಪ್ರತಿಷ್ಠಾಪನೆ, ವಿಮಾನ ಗೋಪುರದ ಬ್ರಹ್ಮಕಲಶ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಸಕ ಎಸ್. ಟಿ. ಸೋಮಶೇಖರ್ ಮಾತನಾಡಿ, ‘ಬಡಾವಣೆಯ ಎಲ್ಲ ವರ್ಗದ ಜನರು ಒಗ್ಗಟ್ಟಾಗಿ ದೇವಸ್ಥಾನ ನಿರ್ಮಿಸಿದ್ದಾರೆ. ಪ್ರತಿನಿತ್ಯ ಎಲ್ಲರೂ ಒಗ್ಗೂಡಿ ಬಡವ, ಶ್ರೀಮಂತ ಎನ್ನದೆ ದೇವರ ಸೇವೆ ಮಾಡಬೇಕು. ತಮ್ಮೆಲ್ಲ ಸಾಮಾಜಿಕ ಪುಣ್ಯದ ಕೆಲಸದಲ್ಲಿ ನಿಮ್ಮ ಸೇವಕನಾಗಿ ಕೈಜೋಡಿಸುತ್ತೇನೆ’ ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತ ಎಸ್. ಟಿ. ಕುಬೇರಸ್ವಾಮಿ, ಕಾಂಗ್ರೆಸ್ ನಾಯಕ ಮುದ್ದನ ಪಾಳ್ಯ ವಿ.ಅಶ್ವಥ್, ದೇವಸ್ಥಾನದ ಸೇವಾಕರ್ತ ಎಸ್. ಟಿ. ರಮೇಶ್, ಓಂ ಪ್ರಕಾಶ್, ಕೃಷ್ಣೆಗೌಡ, ಚಂದ್ರಪ್ಪ, ದಯಾನಂದ್, ಪ್ರಧಾನ ಕಾರ್ಯದರ್ಶಿಗಳಾದ ಜಿ. ಎನ್. ಹನುಮಂತರಾಜು, ಪಳನಿವೆಲ್, ಅರವಿಂದ ಅಶೋಕ್, ಮುಖಂಡರಾದ ಆದಿತ್ಯ ರಮೇಶ್, ನಿಖಿಲ್ ಗೌಡ, ಸುಮಾ ಜನಾರ್ದನ್, ಎನ್. ರಮೇಶ್, ನಾಗರಾಜ್ ಸಿಂಗ್ರಿ, ಬಿ. ರಮೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.