ADVERTISEMENT

ಅಸ್ವಸ್ಥ ಮಕ್ಕಳು ಅಪಾಯದಿಂದ ಪಾರು

ಟ್ಯಾಂಕ್‌ಗೆ ವಿಷ: ಕಿಡಿಗೇಡಿಗಳ ಕೃತ್ಯ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 19:43 IST
Last Updated 16 ಜುಲೈ 2019, 19:43 IST

ಮಂಡ್ಯ: ತಾಲ್ಲೂಕಿನ ಎ.ಹುಲ್ಲು ಕೆರೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಕುಡಿಯುವ ನೀರಿನ ಟ್ಯಾಂಕ್‌ಗೆ ಕ್ರಿಮಿನಾಶಕ ಬೆರೆಸಿರು ವುದು ಕಿಡಿಗೇಡಿಗಳ ಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ.

ಘಟನೆಯಲ್ಲಿ ಅಸ್ವಸ್ಥಗೊಂಡ 11 ವಿದ್ಯಾರ್ಥಿಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ‘ಮಕ್ಕಳು ಅಪಾಯದಿಂದ ಪಾರಾ ಗಿದ್ದು ಇನ್ನೊಂದು ದಿನ ಆಸ್ಪತ್ರೆಯಲ್ಲಿ ನಿಗಾ ವಹಿಸಲಾಗುವುದು. ಬುಧವಾರ ಬೆಳಿಗ್ಗೆ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗುವುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಮಂಚೇಗೌಡ ಹೇಳಿದರು.

ಗ್ರಾಮದಲ್ಲಿ, ಮೂರು ಠಾಣೆ ಗಳ 25 ಸಿಬ್ಬಂದಿ ಮೊಕ್ಕಾಂ ಹೂಡಿದ್ದು ತನಿಖೆ ನಡೆಸುತ್ತಿದ್ದಾರೆ.ಸಿಪಿಐ ನೇಮಿರಾಜು ನೇತೃತ್ವದಲ್ಲಿ ಗ್ರಾಮದ ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ADVERTISEMENT

ಶಾಲಾಭಿವೃದ್ಧಿ ಸಲಹಾ ಸಮಿತಿ, ಶಿಕ್ಷಕರು, ಗ್ರಾಮಸ್ಥರ ನಡುವೆ ಯಾವುದೇ ಭಿನ್ನಾಭಿ ಪ್ರಾಯವಿಲ್ಲ. ಕುಡಿದ ಮತ್ತಿನಲ್ಲಿ ಕಿಡಿಗೇಡಿಗಳು ವಿಷ ಬೆರೆಸಿರಬಹುದು. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ‌ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.