ADVERTISEMENT

ಅದು ಕೇಶ ಮುಂಡನವಲ್ಲ–ಕೇಶ ಕರ್ತನ: ಸಿದ್ಧಲಿಂಗ ಸ್ವಾಮೀಜಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2019, 8:01 IST
Last Updated 28 ಜನವರಿ 2019, 8:01 IST
ಸಿದ್ದಲಿಂಗ ಸ್ವಾಮೀಜಿ
ಸಿದ್ದಲಿಂಗ ಸ್ವಾಮೀಜಿ   

ತುಮಕೂರ:‘ಮಠದ ವಿದ್ಯಾರ್ಥಿಗಳಿಗೆ ಮಾಡುತ್ತಿರುವುದು ಸಾಮಾಹಿಕ ಕೇಶ ಕರ್ತನವೇ ಹೊರತು ಕೇಶ ಮುಂಡನವಲ್ಲ’ ಎಂದುಸಿದ್ಧಗಂಗಾಮಠದ ಅಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

‘ಸವಿತಾ ಸಮಾಜದ ಬೆಂಗಳೂರುಮತ್ತು ತುಮಕೂರಿನವರುಪ್ರತಿ ಬಾರಿ ಬಂದು ಮಠದ ವಿದ್ಯಾರ್ಥಿಗಳಿಗೆ ಕಟಿಂಗ್ ಮಾಡುತ್ತಾರೆ. ಈ ಬಾರಿ ತಮಗೂ ಅವಕಾಶ ನೀಡಿ ಎಂದು ರಾಜ್ಯದ ವಿವಿಧ ಭಾಗದ ಸವಿತಾ ಸಮಾಜದವರು ಕೋರಿದ್ದರು. ಹಾಗಾಗಿ ಅವಕಾಶ ನೀಡಿದ್ದೇವೆ’ ಎಂದರು.

‘ಒಪ್ಪಿಗೆ ಕೇಳುವ ಮತ್ತು ಒಪ್ಪಿಗೆ ನೀಡುವ ಪತ್ರಗಳಲ್ಲಿ ಕಟಿಂಗ್ ಬದಲು ‘ಕೇಶ ಮುಂಡನ’ಪದ ಬಳಕೆಯಾಗಿದೆ. ಅದು ಕೇಶ ಮುಂಡನವಲ್ಲ ಕಟಿಂಗ್ ಎಂದು ಸ್ಪಷ್ಟಪಡಿಸುತ್ತಿದ್ದೇನೆ’ ಎಂದು ಹೇಳಿದರು.

ADVERTISEMENT

‘ಸ್ವಾಮೀಜಿಯವರ ಪುಣ್ಯಸ್ಮರಣೆ ಕಾರ್ಯಕ್ರಮ ಜನವರಿ 31 ರಂದು ನಡೆಯುವುದರಿಂದ ಆ ಸಿದ್ಧತೆಯಲ್ಲಿ ಮಕ್ಕಳು ತೊಡಗಿದ್ದಾರೆ. ಹೀಗಾಗಿ ಜ.29ರಂದು ಮಕ್ಕಳಿಗೆ ಕಟಿಂಗ್ ಮಾಡಲು ಅವಕಾಶ ನೀಡಿದ್ದೇವೆ. ಮಕ್ಕಳು ಕಟಿಂಗ್ ಬದಲು ತಾವಾಗೇ ಇಷ್ಟಪಟ್ಟು ಕೇಶ ಮುಂಡನ ಮಾಡಿಸಿಕೊಳ್ಳಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.