ಬೆಂಗಳೂರು: ಚಾಮುಂಡೇಶ್ವರಿ ಮತ್ತು ಬಾದಾಮಿ ಬಿಟ್ಟು ಮುಸ್ಲಿಂ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿರುವ ಚಾಮರಾಜ
ಪೇಟೆಯಿಂದ ಸ್ಪರ್ಧಿಸುವ ಇಂಗಿತವನ್ನುವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ.
ಚಾಮರಾಜಪೇಟೆಯಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ಆಯೋಜಿಸುವ ಎಲ್ಲ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಸಿದ್ದರಾಮಯ್ಯ, ಶನಿವಾರ ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಚಾಮರಾಜಪೇಟೆಗೆ ಪದೇ ಪದೇ ಭೇಟಿ ನೀಡುತ್ತಿರುವ ಬಗ್ಗೆ ತಾವಾಗಿಯೇ ಪ್ರಸ್ತಾಪಿಸಿದ ಸಿದ್ದರಾಮಯ್ಯ, ‘ಜಮೀರ್ ಕರೆಯುತ್ತಿದ್ದಾರೆ. ಅದಕ್ಕೆ ಬರುತ್ತಿದ್ದೇನೆ. ಇಲ್ಲಿಂದ ಚುನಾವಣೆಗೆ ನಿಲ್ಲುವಂತೆ ಜಮೀರ್ ಖಾನ್ ಹೇಳಿದ್ದಾರೆ. ಆದರೆ, ಮಾಧ್ಯಮದವರು ಯಾಕೆ ಇಲ್ಲಿಗೆ ಬರ್ತಾನೇ ಇರ್ತೀರಾ ಅಂತಿದ್ದಾರೆ. ನಾನು ಸದ್ಯ ಬಾದಾಮಿಯಲ್ಲೇ ಇದ್ದೇನೆ’ ಎಂದರು.
ಈ ವೇಳೆ, ‘ನೀವು ಚಾಮರಾಜಪೇಟೆಗೆ ಬರಬೇಕು. ಇಲ್ಲಿಂದಲೇ ಸ್ಪರ್ಧಿಸಬೇಕು’ ಎಂದು ಜಮೀರ್ ಬೆಂಬಲಿಗರು, ಕಾರ್ಯಕರ್ತರು ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
ಅದಕ್ಕೆ ಸಿದ್ದರಾಮಯ್ಯ, ‘ಆಯಿತು. ಆ ಮೇಲೆ, ಅದರ ಬಗ್ಗೆ ಯೋಚನೆ ಮಾಡೋಣ’ ಎಂದು ಹೇಳುವ ಮೂಲಕ ಚಾಮರಾಜಪೇಟೆಯತ್ತ ಆಸಕ್ತಿ ಇರುವುದನ್ನು ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.