ADVERTISEMENT

ಚರ್ಮ ಆರೋಗ್ಯ: 'ಸ್ಕಿನ್ನಥಾನ್‌’ ಜಾಗೃತಿ ಓಟ ನಾಳೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2025, 15:29 IST
Last Updated 1 ಮಾರ್ಚ್ 2025, 15:29 IST
   

ಬೆಂಗಳೂರು: ಚರ್ಮದ ಆರೈಕೆ, ರೋಗಗಳಿಗೆ ಚಿಕಿತ್ಸೆ ಹಾಗೂ ನಕಲಿ ವೈದ್ಯರ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರು ಚರ್ಮ ರೋಗ ವೈದ್ಯರ ಸಂಘವು ಇದೇ ಭಾನುವಾರ ‘ಸ್ಕಿನ್ನಥಾನ್‌’ ಓಟ ಹಮ್ಮಿಕೊಂಡಿದೆ. 

ನಗರದ ಎಚ್.ಎಸ್.ಆರ್. ಬಡಾವಣೆಯ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಬೆಳಿಗ್ಗೆ 6 ಗಂಟೆಗೆ ಓಟ ಪ್ರಾರಂಭವಾಗಲಿದೆ. ವಿವಿಧ ಸಂಸ್ಥೆಗಳ ಸಹಯೋಗದಲ್ಲಿ 10 ಕಿ.ಮೀ., 5 ಕಿ.ಮೀ. ಮತ್ತು 3 ಕಿ.ಮೀ. ಓಟ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಡಾ.ಎಸ್. ಸಚ್ಚಿದಾನಂದ ತಿಳಿಸಿದ್ದಾರೆ.

‘ಅತಿಯಾಗಿ ಸ್ಟಿರಾಯ್ಡ್ ಬಳಕೆ, ಸ್ವಯಂ ಔಷಧೋಪಚಾರಗಳಿಂದ ಉಂಟಾಗುವ ಅಪಾಯಗಳ ಬಗ್ಗೆಯೂ ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಚರ್ಮ ರೋಗಗಳ ಬಗ್ಗೆ ಇರುವು ತಪ್ಪುಕಲ್ಪನೆಗಳನ್ನು ಹೋಗಲಾಡಿಸಲು ಶ್ರಮಿಸಲಾಗುವುದು’ ಎಂದು ಹೇಳಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.