
ಪ್ರಜಾವಾಣಿ ವಾರ್ತೆಬೆಂಗಳೂರು: ಬಾಗಲಕೋಟೆಯ ಸಿದ್ದಾಪುರ ಗ್ರಾಮದ 100ಕ್ಕೂ ಹೆಚ್ಚು ನೇಕಾರರ ಮನೆಗಳಿಗೆ ಎವೊಲ್ಯೂಟ್ ಗ್ರೂಪ್ಸೌರ ವಿದ್ಯುತ್ ದೀಪಗಳ ವ್ಯವಸ್ಥೆಯನ್ನು ಕಲ್ಪಿಸಿದೆ.
ಬಾಗಲಕೋಟೆಯ ಸಿದ್ದಾಪುರ ಗ್ರಾಮದಲ್ಲಿ ವಿದ್ಯುತ್ ಪೂರೈಕೆ ಇದ್ದರೂ ನೇಕಾರರು ನಿರಂತರ ವಿದ್ಯುತ್ ಕಡಿತದ ಸಮಸ್ಯೆಯನ್ನು ಎದುರಿಸು
ತ್ತಿದ್ದರು. ದಿನಕ್ಕೆ 12 ಗಂಟೆ ದುಡಿಯುವ ನೇಕಾರರು, ₹600 ದಿನಗೂಲಿ ಪಡೆಯುತ್ತಾರೆ. ವಿದ್ಯುತ್ ಕಡಿತದಿಂದಾಗಿ ಉತ್ಪಾದನೆಯೂ ಕುಂಠಿತವಾಗಿ, ಆದಾಯದಲ್ಲೂ ಇಳಿಮುಖವಾಗಿ, ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರಿತ್ತು. ನೇಕಾರರ ಸಮಸ್ಯೆಗಳನ್ನು ಮನಗಂಡಸಂಸ್ಥೆ ಸೌರ ವಿದ್ಯುತ್ ದೀಪಗಳ ವ್ಯವಸ್ಥೆಯನ್ನು ಕಲ್ಪಿಸಿದೆ. ಇದರಿಂದ ಯಾವುದೇ ಅಡೆತಡೆಗಳಿಲ್ಲದೆ ನೌಕರರು 12 ಗಂಟೆ ನಿರಂತರವಾಗಿ ಕೆಲಸ ಮಾಡಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.