ADVERTISEMENT

ಬೆಂಗಳೂರು: ಯುದ್ಧ ವಿರೋಧಿಸಿ ಸಹಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 16:14 IST
Last Updated 30 ಜೂನ್ 2025, 16:14 IST
ನಗರದಲ್ಲಿ ಸೌಹಾರ್ದ ಕರ್ನಾಟಕ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹೋರಾಟಗಾರರು ವಿಶ್ವಶಾಂತಿಗಾಗಿ ಮೇಣದ ಬತ್ತಿ ಬೆಳಗಿದರು. ಪ್ರಜಾವಾಣಿ ಚಿತ್ರ.
ನಗರದಲ್ಲಿ ಸೌಹಾರ್ದ ಕರ್ನಾಟಕ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹೋರಾಟಗಾರರು ವಿಶ್ವಶಾಂತಿಗಾಗಿ ಮೇಣದ ಬತ್ತಿ ಬೆಳಗಿದರು. ಪ್ರಜಾವಾಣಿ ಚಿತ್ರ.   

ಬೆಂಗಳೂರು: ಕದನ ವಿರಾಮ ಘೋಷಣೆ ಮಾಡಿದ್ದರೂ ಇರಾನ್ ಮೇಲೆ ಇಸ್ರೇಲ್ ದಾಳಿ ಮುಂದುವರಿಸುವ ಮೂಲಕ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನನ್ನು ಉಲ್ಲಂಘಿಸಿದೆ ಎಂದು ಸೌಹಾರ್ದ ಕರ್ನಾಟಕ ಮುಖಂಡ ಡಾ.ಕೆ.ಪ್ರಕಾಶ್ ಹೇಳಿದರು.

ಲಾಲ್‌ಬಾಗ್ ಪಶ್ಚಿಮ ದ್ವಾರದ ಬಳಿಯ ಕುವೆಂಪು ಪ್ರತಿಮೆ ಮುಂಭಾಗ ಸೌಹಾರ್ದ ಕರ್ನಾಟಕ ವತಿಯಿಂದ ‘ಬೇಡ ಎಂದಿಗೂ ಯುದ್ಧ-ಶಾಂತಿಗೆ ನಾವೆಲ್ಲರೂ ಬದ್ಧ’ ಎಂಬ ಘೋಷವಾಕ್ಯದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ಶಾಂತಿಗಾಗಿ ಮೇಣದ ಬತ್ತಿಯ ಬೆಳಗು, ಸೌಹಾರ್ದ ಕವನ ವಾಚನ ಮತ್ತು ನಾಗರಿಕ ಯುದ್ಧ ವಿರೋಧಿ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇರಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯಿಂದಾಗಿ ಮಕ್ಕಳು, ಮಹಿಳೆಯರು ಸೇರಿ 55 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಜಗತ್ತು ಯುದ್ಧದ ಭೀತಿಗೆ ಒಳಗಾಗುವಂತಹ ವಾತಾವರಣಕ್ಕೆ ಬಂದಿದೆ. ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ನಡೆಸಿದಂತ ಬಾಂಬ್ ದಾಳಿಗಳು ಯುದ್ಧದ ಭೀತಿ ಮತ್ತು ಪರಮಾಣು ಯುದ್ಧದ ಭೀತಿ ಹುಟ್ಟಿಸುವ ಸಂದರ್ಭವನ್ನು ಸೃಷ್ಟಿ ಮಾಡಿದೆ. ಸಾಮ್ರಾಜ್ಯಶಾಹಿ ಅಮೆರಿಕ ತನ್ನ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವ ಕಾರಣಕ್ಕಾಗಿ ಎಲ್ಲ ಕಡೆ ಯುದ್ದ ನಡೆಯಬೇಕೆಂದು ಬಯಸುತ್ತದೆ ಎಂದು ಅವರು ಆರೋಪಿಸಿದರು.

ADVERTISEMENT

ಇದೇ ವೇಳೆ ವಿಶ್ವಶಾಂತಿಗಾಗಿ ಮೇಣದ ಬತ್ತಿ ಬೆಳಗಿಸಿದರು. ಬಳಿಕ ಯುದ್ದ ವಿರೋಧಿಸಿ ಸಹಿ ಸಂಗ್ರಹ ಮಾಡಲಾಯಿತು. 

ಹೋರಾಟಗಾರರಾದ ಕೆ.ಎಸ್.ವಿಮಲಾ, ಗುರುಶಾಂತ್, ರಾಜಶೇಖರ್ ಮೂರ್ತಿ, ರಾಮಕೃಷ್ಣ, ಶಫಿಉಲ್ಲಾ, ಕೆ.ಎಸ್.ಲಕ್ಷ್ಮೀ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.