ADVERTISEMENT

ಕಸ್ತೂರಿರಂಗನ್‌ ವೃತ್ತಿ ಜೀವನದ ‘ಸ್ಪೇಸ್‌ ಆ್ಯಂಡ್‌ ಬಿಯಾಂಡ್‌’ 17ರಂದು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 6:07 IST
Last Updated 13 ಡಿಸೆಂಬರ್ 2021, 6:07 IST
ಸ್ಪೇಸ್‌ ಅಂಡ್‌ ಬಿಯಾಂಡ್‌
ಸ್ಪೇಸ್‌ ಅಂಡ್‌ ಬಿಯಾಂಡ್‌   

ಬೆಂಗಳೂರು: ಬಾಹ್ಯಾಕಾಶ ವಿಜ್ಞಾನ, ಉಪಗ್ರಹಗಳಿಂದ ದೇಶಕ್ಕೆ ಆಗಿರುವ ಪ್ರಯೋಜನಗಳು, ರಾಕೆಟ್‌ಗಳ ನಿರ್ಮಾಣದಲ್ಲಿ ಎದುರಾದ ಸವಾಲುಗಳೂ ಸೇರಿ ಸಂಕೀರ್ಣ ಮತ್ತು ವೈವಿಧ್ಯಮಯ ವಿಷಯಗಳನ್ನು ಒಳ
ಗೊಂಡಿರುವ ಬಾಹ್ಯಾಕಾಶ ವಿಜ್ಞಾನಿ ಡಾ.ಕೆ. ಕಸ್ತೂರಿರಂಗನ್ ಅವರ ವೃತ್ತಿ ಜೀವನ ಕುರಿತ ಕೃತಿ ‘ಸ್ಪೇಸ್‌ ಆ್ಯಂಡ್‌ ಬಿಯಾಂಡ್‌’ ಇದೇ 17 ರಂದು ಬಿಡುಗಡೆಗೊಳ್ಳಲಿದೆ.

ಅಂತರಿಕ್ಷ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಯಶಸ್ಸುಗಳ ಸರಣಿಯನ್ನೇ ನೀಡಿರುವ ಕಸ್ತೂರಿರಂಗನ್‌ ಅವರ ಕಾರ್ಯನಿರ್ವಹಣೆಯನ್ನು ‘ಕಸ್ತೂರಿ ರಂಗನ್ಸ್‌ ಮ್ಯಾಜಿಕ್‌’ ಎಂದೇ ಕರೆಯಲಾಗುತ್ತದೆ. ಪುಸ್ತಕದ ಮೊದಲ ಭಾಗದಲ್ಲಿ ಕಸ್ತೂರಿರಂಗನ್ ಅವರ ಹಿನ್ನೆಲೆ, ಶಿಕ್ಷಣ ಮತ್ತು ವೃತ್ತಿ ಜೀವನವನ್ನು ವಿವರಿಸಲಾಗಿದೆ. ಈ ಕೃತಿಯನ್ನು ಭಾರತೀಯ ಅಂತರಿಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಮಂದಿರದ (ಐಐಎಸ್‌ಟಿ) ನಿವೃತ್ತ ನಿರ್ದೇಶಕ, ಕನ್ನಡಿಗ ಡಾ.ಬಿ.ಎನ್‌.ಸುರೇಶ್‌ ಸಂಪಾದಿಸಿದ್ದಾರೆ. ಅಂತರರಾಷ್ಟ್ರೀಯ ಪ್ರಕಾಶನ ಸಂಸ್ಥೆ ‘ಸ್ಪ್ರಿಂಗರ್‌’ ಈ ಕೃತಿಯನ್ನು ಪ್ರಕಟಿಸಿದೆ.

ಅಂತರಿಕ್ಷ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ರಾಷ್ಟ್ರದ ಅಭಿವೃದ್ಧಿ, ಅವುಗಳ ಮೂಲಕ ದೇಶವು ಮುನ್ನಡೆ ಈ ಬಗ್ಗೆ ಕೃತಿಯಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.