ಜೈಶಂಕರ್
ಮ್ಯಾಡ್ರಿಡ್: ಶೀಘ್ರವೇ ಸ್ಪೇನ್‌ನ ನೂತನ ರಾಯಭಾರ ಕಚೇರಿ ಬೆಂಗಳೂರಿನಲ್ಲಿ ಆರಂಭವಾಗಲಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ.
ಸ್ಪೇನ್‌ಗೆ ಎರಡು ದಿನಗಳ ರಾಜತಾಂತ್ರಿಕ ಭೇಟಿ ನೀಡಿರುವ ಅವರು ಮ್ಯಾಡ್ರಿಡ್‌ನಲ್ಲಿ ಆಯೋಜಿಸಿದ್ದ ಅನಿವಾಸಿ ಭಾರತೀಯರ ಜೊತೆಗಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾರ್ಸಿಲೋನಾದಲ್ಲೂ ಭಾರತೀಯ ರಾಯಭಾರ ಕಚೇರಿ ಆರಂಭವಾಗಲಿದೆ. ಹಾಗೆಯೇ ಬೆಂಗಳೂರಿನಲ್ಲಿ ಅವರಿಂದ ನಮಗಾಗಿ ಹೊಸ ರಾಯಭಾರ ಕಚೇರಿ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ಉಭಯ ದೇಶಗಳ ನಡುವೆ ಉತ್ತಮ ಬಾಂಧವ್ಯ ಇದ್ದು ಇದನ್ನು ಇನ್ನೂ ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ಯಬೇಕಾಗಿದೆ. ಪ್ರವಾಸೋದ್ಯಮದ ದೃಷ್ಟಿಯಿಂದ ಎರಡೂ ದೇಶಗಳಿಗೆ ರಾಯಭಾರ ಕಚೇರಿ ತುಂಬಾ ಮುಖ್ಯವಾಗಿದ್ದವು ಎಂದಿದ್ದಾರೆ.
ವಿದೇಶಾಂಗ ಸಚಿವರಾದ ಮೇಲೆ ಜೈಶಂಕರ್ ಅವರು ಇದೇ ಮೊದಲ ಬಾರಿಗೆ ಸ್ಪೇನ್‌ಗೆ ಭೇಟಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.