ADVERTISEMENT

ಅ.9ರಂದು ‘ಎಸ್‌ಪಿಬಿ’ ಸಂಗೀತ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 16:45 IST
Last Updated 6 ಅಕ್ಟೋಬರ್ 2021, 16:45 IST

ಬೆಂಗಳೂರು: ಚೆನ್ನೈನ ಮೌನರಾಗಂ ಸಂಸ್ಥೆಯು ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರ ಸ್ಮರಣಾರ್ಥ ‘ಸೆಲೆಬ್ರೇಟಿಂಗ್ ಎಸ್‌ಪಿಬಿಯಿಸಂ’ ಎಂಬ ವಿಶೇಷ ಸಂಗೀತ ಕಾರ್ಯಕ್ರಮವನ್ನು ಅ.9ರಂದು ಸಂಜೆ 6 ಗಂಟೆಗೆ ಬಸವನಗುಡಿಯ ಗಾಯನ ಸಮಾಜ ಸಭಾಂಗಣದಲ್ಲಿ ಆಯೋಜಿಸಿದೆ.

‘ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಗೌರವ ಸೂಚಿಸುವ ಸಲುವಾಗಿ ಹಮ್ಮಿಕೊಂಡಿರುವಕಾರ್ಯಕ್ರಮದಲ್ಲಿಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರ ಪುತ್ರ ಎಸ್‌.ಪಿ.ಚರಣ್, ಗಾಯಕಿ ಪ್ರಿಯಾಂಕಾ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಬುಕ್ ಮೈ ಶೋನಲ್ಲಿ ಕಾರ್ಯಕ್ರಮದಟಿಕೆಟ್‌ಗಳು ಲಭ್ಯ’ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT