ಬೆಂಗಳೂರು: ಡಿಜಿಟಲ್ ಯುಗದಲ್ಲಿ ಅತ್ಯಂತ ಮಹತ್ವ ಎನಿಸಿರುವ ಸಂವಹನಕ್ಕೆ ಉತ್ತೇಜನ ನೀಡಲು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆ ಆಶ್ರಯದಲ್ಲಿ ‘ಸ್ಪೆಲ್ ಬೀ’ ಸ್ಪರ್ಧೆ ಗುರುವಾರ ಆಯೋಜಿಸಲಾಗಿತ್ತು.
ಕೆಎಂಎಫ್ ಮತ್ತು ಎಂಎಸ್‌ಐಎಲ್ ಸಹಯೋಗದಲ್ಲಿ ಬಾಲಭವನದಲ್ಲಿ ನಡೆದ ಸ್ಪರ್ಧೆಯಲ್ಲಿ ವಿವಿಧ ಶಾಲೆಗಳ 370 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸೇಂಟ್ ಜೋಸೆಫ್ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ಅರುಲ್ ಮಣಿ ಕಾರ್ಯಕ್ರಮ ನಡೆಸಿಕೊಟ್ಟರು.
ವಿಜೇತರ ವಿವರ: ಕಿರಿಯರ ವಿಭಾಗದಲ್ಲಿ ಚಿಕ್ಕಬಾಣಾವರ ನ್ಯಾಷನಲ್ ಪಬ್ಲಿಕ್ ಶಾಲೆಯ ಪೂನಂ ಕಾಮತ್ ಪ್ರಥಮ, ಸೌಂದರ್ಯ ಶಾಲೆಯ ಅಪರ್ಣಾ ಕೌಲಿ ದ್ವಿತೀಯ, ಸಿಲಿಕಾನ್ ಸಿಟಿ ಅಕಾಡೆಮಿ ಆಫ್ ಸೆಕೆಂಡರಿ ಶಾಲೆಯ ಜೆ. ಅವಿನಾಶ್ ತೃತೀಯ, ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಯಅನಿಕೇತ್ ರಾವ್ ನಾಲ್ಕನೇ ಸ್ಥಾನ ಮತ್ತು ಪದ್ಮನಾಭನಗರ ಕಾರ್ಮೆಲ್ ಶಾಲೆಯ ಮನೋಜ್ಞಾ ಅಡಿಗ ಐದನೇ ಸ್ಥಾನ ಪಡೆದರು.
ಹಿರಿಯರ ವಿಭಾಗದಲ್ಲಿಕೆನ್ಸ್ರಿ ಶಾಲೆಯ ಎಸ್.ವಿ. ಅನಂತಕೃಷ್ಣ ಪ್ರಥಮ, ರಾಜಾಜಿನಗರದ ನ್ಯಾಷನಲ್ ಪಬ್ಲಿಕ್ ಶಾಲೆಯ ಎಂ. ವೈಭವ್ ದ್ವಿತೀಯ, ಕೆನ್ಸ್ರಿ ಶಾಲೆಯ ಎಸ್. ಅಭಿನವ್ ತೃತೀಯ, ಕೋರಮಂಗಲ ನ್ಯಾಷನಲ್ ಪಬ್ಲಿಕ್ ಶಾಲೆಯ ಪಿ.ಬಿ. ಶಾರ್ವರಿ ನಾಲ್ಕನೇ ಸ್ಥಾನ ಮತ್ತು ಪದ್ಮನಾಭನಗರ ಕಾರ್ಮೆಲ್ ಶಾಲೆಯ ವರ್ಷಾ ರಘುರಾಮ್ ಐದನೇ ಸ್ಥಾನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.