ADVERTISEMENT

‘ಸ್ಪೈಸಿ ಭೋಜನಂ’ ಹೊಸ ಶಾಖೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 1:03 IST
Last Updated 17 ಆಗಸ್ಟ್ 2021, 1:03 IST
ವಸಂತಪುರ ರಸ್ತೆಯಲ್ಲಿ ‘ಸ್ಪೈಸಿ ಭೋಜನಂ’ ಶಾಖೆಯನ್ನು ಸ್ವಪ್ನಾ ಅರುಣ್‍ ಉದ್ಘಾಟಿಸಿದರು. 
ವಸಂತಪುರ ರಸ್ತೆಯಲ್ಲಿ ‘ಸ್ಪೈಸಿ ಭೋಜನಂ’ ಶಾಖೆಯನ್ನು ಸ್ವಪ್ನಾ ಅರುಣ್‍ ಉದ್ಘಾಟಿಸಿದರು.    

ಬೆಂಗಳೂರು:‌‘ಸ್ಪೈಸಿ ಭೋಜನಂ’ ರೆಸ್ಟೋರೆಂಟ್‌ನ ನೂತನ ಶಾಖೆಯನ್ನು ನಗರದ ವಸಂತಪುರ ಮುಖ್ಯರಸ್ತೆಯಲ್ಲಿ ಇತ್ತೀಚೆಗೆ ತೆರೆಯಲಾಯಿತು.

ಶಾಖೆ ಉದ್ಘಾಟಿಸಿ ಮಾತನಾಡಿದ ರೆಸ್ಟೋರೆಂಟ್ ಮಾಲೀಕರಾದ ಸ್ವಪ್ನಾ ಅರುಣ್‍,‘ ನಮ್ಮದು ನಾಟಿ ಸ್ಟೈಲ್ ಮತ್ತು ಪರಿಸರಸ್ನೇಹಿ ಅಡುಗೆಗಳು. ಮಣ್ಣಿನ ಮಡಿಕೆಗಳಲ್ಲೇಹಂಡಿ ಬಿರಿಯಾನಿ ತಯಾರಿ ನಮ್ಮ ವಿಶೇಷ. ಮಾಂಸಾಹಾರ ಪ್ರಿಯರಿಗೆ ಒಂದೇ ಕಡೆ ಮಂಗಳೂರು, ಆಂಧ್ರ ಹಾಗೂ ಚೆಟ್ಟಿನಾಡು ಶೈಲಿಯ ಬಿರಿಯಾನಿ ಸವಿಯುವ ಅವಕಾಶ ಕಲ್ಪಿಸಿದ್ದೇವೆ’ ಎಂದರು.

‘ಕುಂಬಳಗೋಡಿನಲ್ಲಿರುವ ಆಹಾರ ತಯಾರಿ ಘಟಕದಿಂದ ಎಲ್ಲ ಶಾಖೆಗಳಿಗೆ ಆಹಾರ ಪೂರೈಕೆಯಾಗುತ್ತದೆ. ನಗರದಲ್ಲಿ 40 ಶಾಖೆಗಳನ್ನು ತೆರೆಯಲು ನಿರ್ಧರಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.