ADVERTISEMENT

ಕಬಡ್ಡಿ ಪಂದ್ಯಾವಳಿ ಆರಂಭ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 18:42 IST
Last Updated 3 ನವೆಂಬರ್ 2025, 18:42 IST
ಮೂರು ದಿನದ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿಗೆ ಶಾಸಕ ಎಸ್. ಮುನಿರಾಜು ಅವರು ಚಾಲನೆ ನೀಡಿದರು.
ಮೂರು ದಿನದ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿಗೆ ಶಾಸಕ ಎಸ್. ಮುನಿರಾಜು ಅವರು ಚಾಲನೆ ನೀಡಿದರು.   

ಪೀಣ್ಯ ದಾಸರಹಳ್ಳಿ: ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯ ಅಲ್ಲ. ಆಟದಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡುವುದು ಮುಖ್ಯ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.

ದಾಸರಹಳ್ಳಿಯ ಕಾಳಸ್ತ್ರೀ ನಗರದ ಸರ್ಕಾರಿ ಶಾಲಾ ಅವರಣದಲ್ಲಿ ಬೆಂಗಳೂರು ವಿಭಾಗ ಮಟ್ಟದ 14 ರಿಂದ 17 ವರ್ಷವಯೋಮಿತಿಯ ಬಾಲಕ, ಬಾಲಕಿಯರ ಕಬಡ್ಡಿ ಪಂದ್ಯಾವಳಿ 2025 -26ರ ಮೂರು ದಿನದ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

ಕಬಡ್ಡಿ ಒಂದು ಗ್ರಾಮೀಣ ಕ್ರೀಡೆ. ಆಟಗಾರನ ಚುರುಕುತನ ಮತ್ತು ಕೌಶಲಗಳನ್ನು ಒಳಗೊಂಡಿದೆ ಎಂದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎನ್. ಶೈಲಾ ಮಾತನಾಡಿ, 'ಕಬಡ್ಡಿ ಸ್ಪರ್ಧೆಯಲ್ಲಿ ರಾಜ್ಯದ 11 ಜಿಲ್ಲೆಗಳಿಂದ ಸುಮಾರು 660 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಮೂರು ದಿನಗಳ ಸ್ಪರ್ಧೆಯಲ್ಲಿ ವಿಜೇತರಿಗೆ ಸೂಕ್ತ ಬಹುಮಾನ ನೀಡಲಾಗುವುದು’ ಎಂದರು.

ಸಮಾರಂಭದಲ್ಲಿ ಬೆಂಗಳೂರು ಉತ್ತರ ಜಿಲ್ಲೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಅಂಜಿನಪ್ಪ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಹಮ್ಮದ್ ಹುಸೇನ್ ಪೀರ್, ಬೆಂಗಳೂರು ಉತ್ತರ ವಲಯ 3ರ ದೈಹಿಕ ಶಿಕ್ಷಣ ಪರಿವೀಕ್ಷಕ ಶೇಖರಪ್ಪ, 4ರ ಪರಿವೀಕ್ಷಕ ಗಂಗಪ್ಪ, ಸಿಆರ್ ಪಿ ಪುಷ್ಪಲತಾ ಮತ್ತು ವಿವಿಧ ಜಿಲ್ಲೆಯ ಶಿಕ್ಷಕರು ಇದ್ದರು.

ಕಬಡ್ಡಿ ಕ್ರೀಡಾಪಟುಗಳಿಗೆ ಶಾಸಕ ಎಸ್. ಮುನಿರಾಜು ಅವರು ಶುಭ ಹಾರೈಸಿದರು.
ಮೂರು ದಿನದ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿಗೆ ಶಾಸಕ ಎಸ್. ಮುನಿರಾಜು ಅವರು ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.