ಬೆಂಗಳೂರು: ನಗರದಲ್ಲಿ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ.
ನ್ಯಾಷನಲ್ ಹೈಸ್ಕೂಲ್: ಬಸವನಗುಡಿಯ ನ್ಯಾಷನಲ್ ಹೈ ಸ್ಕೂಲ್ ವಿದ್ಯಾರ್ಥಿನಿ ಪ್ರಣವಿ ಎನ್. ರಾಜ್ 625ಕ್ಕೆ 624 ಅಂಕ ಗಳಿಸಿ ರಾಜ್ಯದಲ್ಲಿ ಎರಡನೇ ಶ್ರೇಯಾಂಕ ಪಡೆದಿದ್ದಾರೆ. ಎನ್ಇಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್.ಎನ್. ಸುಬ್ರಮಣ್ಯ, ಗೌರವ ಕಾರ್ಯದರ್ಶಿ ವಿ. ವೆಂಕಟಶಿವಾ ರೆಡ್ಡಿ, ಪದಾಧಿಕಾರಿಗಳು, ಅಧ್ಯಾಪಕರು, ಸಿಬ್ಬಂದಿ ಅಭಿನಂದಿಸಿದರು.
ಆರ್‌ಟಿಇ: ಶೇ 75.57 ತೇರ್ಗಡೆ
ಕಡ್ಡಾಯ ಶಿಕ್ಷಣ ಕಾಯ್ದೆ (ಆರ್‌ಟಿಇ) ಅಡಿ ಸೌಲಭ್ಯ ಪಡೆದು ಶಾಲೆಗಳಿಗೆ ದಾಖಲಾದ ವಿದ್ಯಾರ್ಥಿಗಳು ಶೇ 75.57ರಷ್ಟು ಫಲಿತಾಂಶ ಪಡೆದಿದ್ದಾರೆ. ಪರೀಕ್ಷೆ ಬರೆದಿದ್ದ 25,423 ವಿದ್ಯಾರ್ಥಿಗಳಲ್ಲಿ 19,235 ತೇರ್ಗಡೆಯಾಗಿದ್ದಾರೆ.
‘ಆರ್ಥಿಕವಾಗಿ ಹಿಂದುಳಿದ, ಬಡತನ ರೇಖೆಗಿಂತ ಕೆಳಗಿರುವ ವರ್ಗದ ವಿದ್ಯಾರ್ಥಿಗಳ ಸಾಧನೆ ಮೆಚ್ಚುವಂತಿದೆ. 50 ವಿದ್ಯಾರ್ಥಿಗಳು 620ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ಅದರಲ್ಲೂ ಶೇ 83.92ರಷ್ಟು ಬಾಲಕಿಯರು ತೇರ್ಗಡೆಯಾಗಿದ್ದಾರೆ’ ಎಂದು ಆರ್‌ಟಿಇ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್. ಯೋಗಾನಂದ ಶ್ಲಾಘಿಸಿದ್ದಾರೆ.
ಎಚ್‌ಎಸ್‌ಎಲ್‌ಎನ್ ಗ್ಲೋಬಲ್ ಶಾಲೆಗೆ ಶೇ 100
ಹೆಸರಘಟ್ಟದ ಎಚ್‌ಎಸ್‌ಎಲ್‌ಎನ್ ಗ್ಲೋಬಲ್ ಸ್ಮಾರ್ಟ್ ಶಾಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶದ ಸಾಧನೆ ಮಾಡಿದೆ.
ಪರೀಕ್ಷೆಗೆ ಹಾಜರಾದ 10 ವಿದ್ಯಾರ್ಥಿಗಳ ಪೈಕಿ ಎಂ. ಸಂಜನಾ (ಶೇ 95), ರಫಿಯಾ ಖಾನ್ (ಶೇ 84.64) ಅಂಕಗಳನ್ನು ಪಡೆದಿದ್ದಾರೆ.
ಎಚ್‌ಎಸ್‌ಎಲ್‌ಎನ್ ಶಾಲೆಯಲ್ಲಿ ಬರ್ಲಿಂಗ್‌ಟನ್ ಇಂಗ್ಲಿಷ್ ಪಠ್ಯಕ್ರಮ ಅನುಷ್ಠಾನ ಮಾಡಲಾಗಿತ್ತು. ಪೂರ್ವ ಪ್ರಾಥಮಿಕದಿಂದ ಪ್ರೌಢಶಾಲೆವರೆಗೂ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಈ ಬಾರಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪೈಕಿ ಎಲ್ಲರೂ ಉನ್ನತ ಶ್ರೇಣಿ ಮತ್ತು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲರಾದ ಲಿಖಿತಾ ಗೌಡ ಹೇಳಿದ್ದಾರೆ.
ಸೌಂದರ್ಯ ಸ್ಕೂಲ್: ನಗರದ ಸೌಂದರ್ಯ ಸ್ಕೂಲ್‌ನ ಲೇಖನ ಎನ್. 622 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಭರತ್ ಎನ್.ಯು, ಸಂಯಮ ಎಚ್.ಪಿ., ಪ್ರತೀಕ್ಷಾ ಸಿ. ಅವರು 620 ಅಂಕ ಪಡೆದಿದ್ದಾರೆ. ಗಾನವಿ ಎಚ್.ಡಿ. 619 ಅಂಕಗಳಿಸಿದ್ದಾರೆ ಎಂದು ಸೌಂದರ್ಯ ಸಮೂಹ ಸಂಸ್ಥೆಗಳ ಸಿಇಒ ಕೀರ್ತನ್ ಕುಮಾರ್ ಎಂ. ತಿಳಿಸಿದ್ದಾರೆ.
ಸೇಂಟ್ ಫಿಲೋಮಿನಾ ಪಬ್ಲಿಕ್ ಶಾಲೆ
ನಿಖಿಲ್ ಟಿ. (ಶೇ 98), ಯಶಸ್ವಿನಿ ಡಿ.ಆರ್. (ಶೇ 98), ಸೋನಿಕಾ ಕೆ.ಎಂ. (ಶೇ 96)
ಹೋಲಿ ಏಂಜಲ್ ಹೈಸ್ಕೂಲ್
ತೇಜಶ್ರೀ 620 (ಶೇ 99.2)
ಶ್ರೀವಿದ್ಯಾ ನಿಕೇತನ ಹೈಸ್ಕೂಲ್, ಟಿ. ದಾಸರಹಳ್ಳಿ
ಚರಣ್ ನಾಯ್ಕ್ 608 (97.28), ಹರ್ಷಿತಾ ಕೆ.ಎಂ. 597 (ಶೇ 95.52)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.