ADVERTISEMENT

ಸಾರ್ವಜನಿಕ ಸಾರಿಗೆ ಬಳಕೆ ಉತ್ತೇಜನಕ್ಕೆ ‘ಸ್ಟ್ಯಾಂಪ್’

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 16:15 IST
Last Updated 11 ಏಪ್ರಿಲ್ 2025, 16:15 IST
   

ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಜನರು ವೈಯಕ್ತಿಕ ವಾಹನಗಳಲ್ಲಿ ಪ್ರಯಾಣಿಸುವ ಬದಲು ನಮ್ಮ ಮೆಟ್ರೊದಂಥ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಬೆಳೆಸುವಂತೆ ಉತ್ತೇಜನ ನೀಡುವ ‘ಸ್ಟ್ಯಾಂಪ್‌’ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಬಿಎಂಆರ್‌ಸಿಎಲ್‌, ಬಿಎಂಟಿಸಿ, ಎಲೆಕ್ಟ್ರಾನಿಕ್‌ಸಿಟಿ  ಇಂಡಸ್ಟ್ರೀಸ್‌ ಅಸೋಸಿಯೇಶನ್‌ (ಇಎಲ್‌ಸಿಐಎ), ಟೊಯೊಟಾ ಮೊಬಿಲಿಟಿ ಫೌಂಡೇಶನ್‌ (ಟಿಎಂಎಫ್‌) ಸಹಯೋಗದಲ್ಲಿ ‘ಸ್ಟ್ಯಾಂಪ್‌: ಪ್ರಯಾಣಿಕರ ವರ್ತನೆಯನ್ನು ಹುರಿದುಂಬಿಸುವುದು’ ಕಾರ್ಯಕ್ರಮ ನಡೆಯಿತು. 

ಈ ವರ್ಷದ ಉತ್ತರಾರ್ಧದಲ್ಲಿ ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ. ಆರ್‌.ವಿ. ರಸ್ತೆಯಿಂದ ಬೊಮ್ಮಸಂದ್ರವನ್ನು ಸಂಪರ್ಕಿಸುವ ಈ ಮಾರ್ಗವು ಬೆಂಗಳೂರಿನ ಅತಿದೊಡ್ಡ ಉದ್ಯೋಗ ಕೇಂದ್ರ ‘ಎಲೆಕ್ಟ್ರಾನಿಕ್‌ ಸಿಟಿ’ ಮೂಲಕ ಹಾದು ಹೋಗಲಿದೆ. ಇಲ್ಲಿನ ಉದ್ಯೋಗದಾತರು, ಉದ್ಯೋಗಿಗಳು ವೈಯಕ್ತಿಕ ವಾಹನಗಳನ್ನು ಬಳಸುವ ಬದಲು ನಮ್ಮ ಮೆಟ್ರೊ ಬಳಸುವಂತಾಗಬೇಕು. ಮೆಟ್ರೊಗೆ ಪೂರಕವಾಗಿ ಬಿಎಂಟಿಸಿಯಿಂದ ಫೀಡರ್‌ ಬಸ್‌ಗಳು ಸಂಚರಿಸಲಿದ್ದು, ಅದರ ಉಪಯೋಗ ಪಡೆದುಕೊಳ್ಳಬೇಕು. ಬಸ್‌ಗಳ ಸಂಖ್ಯೆ ಹೆಚ್ಚಾದರೆ ಸಾಲದು, ಬಸ್‌ಗಳಲ್ಲಿ ಸಂಚರಿಸುವವರ ಸಂಖ್ಯೆಯೂ ಹೆಚ್ಚಾಗಬೇಕು ಎಂಬ ಅಭಿಪ್ರಾಯವನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದವರು ವ್ಯಕ್ತಪಡಿಸಿದರು.

ADVERTISEMENT

ಸ್ಟೇಷನ್‌ ಆ್ಯಕ್ಸೆಸ್‌ ಆ್ಯಂಡ್‌ ಮೊಬಿಲಿಟಿ ಪ್ರೋಗ್ರಾಂನಲ್ಲಿ (ಸ್ಟ್ಯಾಂಪ್ಸ್‌) ಜನರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ಭಾಗವಹಿಸಬಹುದು. ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಕೊನೇ ದಿನಾಂಕ ಸಹಿತ ವಿವಿಧ ಮಾಹಿತಿಗಳಿಗಾಗಿ STAMP: Nudging Commuter Behaviourಗೆ ಭೇಟಿ ನೀಡಲು ಸಂಘಟಕರು ಕೋರಿದ್ದಾರೆ.

ಕಾರ್ಯಕ್ರಮದಲ್ಲಿ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್‌, ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ. ಪ್ರಭಾಕರ ರೆಡ್ಡಿ,  ಟೊಯೊಟಾ ಕಿರ್ಲೋಸ್ಕರ್‌ ಮೋಟಾರ್‌ ಮುಖ್ಯಸ್ಥ ವಿಕ್ರಂ ಗುಲಾಟೆ, ನಿರ್ದೇಶಕ ಪ್ರಾಸ್‌ ಗಣೇಶ್‌, ಇಂಟಿಗ್ರೇಟೆಡ್‌ ಟ್ರಾನ್ಸ್‌ಪೋರ್ಟ್‌ ಕಾರ್ಯನಿರ್ವಾಹಕ ನಿರ್ದೇಶಕ ಪವನ್‌ ಮುಲುಕುಟ್ಟಾ, ವಿವಿಧ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.