ADVERTISEMENT

‘ಠಾಣೆ ಭೇಟಿ ಬದಲು ಸೇವಾ ಸಿಂಧು ಆ್ಯಪ್ ಬಳಸಿ’

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 19:44 IST
Last Updated 24 ಜುಲೈ 2020, 19:44 IST

ಬೆಂಗಳೂರು: ‘ಪೊಲೀಸ್ ಪರಿಶೀಲನಾ ಪ್ರಮಾಣಪತ್ರ ಪಡೆಯಲು ಠಾಣೆಗಳಿಗೆ ಭೇಟಿ ನೀಡುವ ಬದಲು, ಸರ್ಕಾರದ ‘ಸೇವಾ ಸಿಂಧು’ ಆ್ಯಪ್ ಬಳಸಿ’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಉದ್ಯೋಗ, ವೀಸಾ ಸೇರಿದಂತೆ ಎಂಟು ಉದ್ದೇಶಕ್ಕಾಗಿ ಪೊಲೀಸ್ ಪರಿಶೀಲನಾ ಪ್ರಮಾಣ ಪತ್ರ ಪಡೆಯಲು ಸಾರ್ವಜನಿಕರು ಠಾಣೆಗಳಿಗೆ ಹೋಗಬೇಕಿಲ್ಲ. ಸೇವಾ ಸಿಂಧು ಆನ್‌ಲೈನ್ ವ್ಯವಸ್ಥೆ ಮೂಲಕ ಸಂಬಂಧಪಟ್ಟವರಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ದಾಖಲೆ ಪರಿಶೀಲನೆ ಬಳಿಕ ಆನ್‌ಲೈನ್‌ನಲ್ಲಿ ಡಿಜಿಟಲ್ ಸಹಿಯುಳ್ಳ ಪೊಲೀಸರ ಪರಿಶೀಲನಾ ಪ್ರಮಾಣಪತ್ರ ಲಭ್ಯವಾಗಲಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT