ADVERTISEMENT

‘ನಾಸಾ’ ಪ್ರವಾಸಕ್ಕೆ ವಿದ್ಯಾರ್ಥಿ ಆಯ್ಕೆ

ಪ್ರಜಾವಾಣಿ ವಾರ್ತೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2022, 20:05 IST
Last Updated 20 ಜೂನ್ 2022, 20:05 IST
ನಾಸಾ ಪ್ರವಾಸಕ್ಕೆ ಅಯ್ಕೆಯಾಗಿರುವ ವಿದ್ಯಾರ್ಥಿ ಅನ್ಶುಲ್‍ಸಾಹ್‌ ಅವರನ್ನು ಅಭಿನಂದಿಸಲಾಯಿತು
ನಾಸಾ ಪ್ರವಾಸಕ್ಕೆ ಅಯ್ಕೆಯಾಗಿರುವ ವಿದ್ಯಾರ್ಥಿ ಅನ್ಶುಲ್‍ಸಾಹ್‌ ಅವರನ್ನು ಅಭಿನಂದಿಸಲಾಯಿತು   

ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ‘ಆಕಾಶ್‌–ಬೈಜೂಸ್‍’ ಸಂಸ್ಥೆಯ ವಿದ್ಯಾರ್ಥಿ ಅನ್ಶುಲ್‍ಸಾಹ್‌ ‘ನಾಸಾ’ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ.

‘ನ್ಯಾಷನಲ್ ಟ್ಯಾಲೆಂಟ್ ಹಂಟ್’ (ಎಎನ್‌ಟಿಎಚ್‌ಇ) ಪರೀಕ್ಷೆಯ 12ನೇ ಆವೃತ್ತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಈ ವಿದ್ಯಾರ್ಥಿ ನಾಸಾ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

‘ನಾಸಾಗೆ ಹೋಗಲು ಅವಕಾಶ ಪಡೆಯಲು ನೆರವಾದ ಸಂಸ್ಥೆಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಇದು ನನ್ನ ಕನಸು. ಈ ಕನಸು ಈಗ ನನಸಾಗಿದೆ. ಅವಿಸ್ಮರಣೀಯ ಅನುಭವವನ್ನು ಪಡೆಯಲು ಮತ್ತು ಕಲಿಯಲು ತುಂಬಾ ಉತ್ಸುಕನಾಗಿದ್ದೇನೆ’ಎಂದು ಅನ್ಶುಲ್‍ಸಾಹ್ ಹೇಳಿದ್ದಾರೆ.

ADVERTISEMENT

‘ನಾಸಾ ಪ್ರವಾಸಕ್ಕೆ ಅನ್ಶುಲ್‍ಸಾಹ್ ಆಯ್ಕೆ ಆಗಿರುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತಿದೆ. ಇದೊಂದು ಹೊಸ ಮೈಲಿಗಲ್ಲು’ ಎಂದು ಆಕಾಶ್– ಬೈಜೂಸ್‍ನ ವ್ಯವಸ್ಥಾಪಕ ನಿರ್ದೇಶಕ ಆಕಾಶ್ ಚೌಧರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.