ADVERTISEMENT

ಸುಬ್ರಮಣ್ಯೇಶ್ವರ ಕೋ ಅಪರೇಟಿವ್ ಬ್ಯಾಂಕ್‌ಗೆ ₹8.83 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2024, 16:11 IST
Last Updated 23 ಸೆಪ್ಟೆಂಬರ್ 2024, 16:11 IST
<div class="paragraphs"><p>ಹಣ </p></div>

ಹಣ

   

ಬೆಂಗಳೂರು: ನಗರದ ಸುಬ್ರಮಣ್ಯೇಶ್ವರ ಕೋ ಅಪರೇಟಿವ್ ಬ್ಯಾಂಕ್ ಲಿಮಿಟೆಡ್ 2023–24ನೇ ಸಾಲಿನಲ್ಲಿ ₹ 8.83 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಕೆ.ಎಂ. ರಂಗಧಾಮ ಶೆಟ್ಟಿ ಮತ್ತು ಉಪಾಧ್ಯಕ್ಷ ಡಿ.ಆರ್. ವಿಜಯಸಾರಥಿ ತಿಳಿಸಿದರು.

ಬ್ಯಾಂಕ್‌ನ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಬ್ಯಾಂಕ್ ಇತ್ತೀಚೆಗೆ ಸುವರ್ಣ ಮಹೋತ್ಸವ ಆಚರಿಸಿಕೊಂಡಿದೆ, 2020-21ರಲ್ಲಿ ಬ್ಯಾಂಕ್ ₹22.38 ಲಕ್ಷ ಲಾಭ ಗಳಿಸಿತ್ತು. ಈ ಬಾರಿ ಲಾಭದ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ ಎಂದು ವಿವರಿಸಿದರು.

ADVERTISEMENT

‘ಲೆಕ್ಕ ಪರಿಶೋಧನೆಯಲ್ಲಿ ಬ್ಯಾಂಕ್ ಅನ್ನು ‘ಎ’ ವಿಭಾಗದಲ್ಲಿ ವರ್ಗೀಕರಿಸಲಾಗಿದೆ. ನಿವ್ವಳ ಅನುತ್ಪಾದಕ ಆಸ್ತಿ (ಎನ್‌ಪಿಎ) ಶೇಕಡ 6ಕ್ಕಿಂತ ಕಡಿಮೆ ಇರಬೇಕೆಂಬ ನಿಯಮ ಇದೆ. ನಮ್ಮ ಬ್ಯಾಂಕ್‌ನ ಎನ್‌ಪಿಎ ಶೇ 3ರ ಮಿತಿಯಲ್ಲಿದೆ’ ಎಂದರು.

‘ಬ್ಯಾಂಕ್ ಈಗಾಗಲೇ ಎರಡು ಶಾಖೆಗಳಲ್ಲಿ ಸ್ವಂತ ಕಟ್ಟಡ ಹೊಂದಿದ್ದು, ಮುಂದೆ ಮತ್ತೆ ಎರಡು ಶಾಖೆಗಳಿಗೆ ಸ್ವಂತ ಕಟ್ಟಡ ನಿರ್ಮಿಸುವ ಗುರಿ ಇದೆ’ ಎಂದು ಹೇಳಿದರು.

ನಿರ್ದೇಶಕರಾದ ಸಿ.ಎಲ್.‌ ವೆಂಕಟಾಚಲಪತಿ, ಪಿ. ರುದ್ರಮೂರ್ತಿ, ಸತ್ಯಮೂರ್ತಿ, ನಂಜೇಗೌಡ, ಎಂ.ಕೆ. ಸುರೇಶ್‌ ಬಾಬು, ಮಹಾಲಕ್ಷ್ಮಿ, ಅನ್ನಪೂರ್ಣಮ್ಮ, ಜಯಲಕ್ಷ್ಮಿ ಜೆ. ತೋಟಗೆರೆ, ರವೀಂದ್ರ ಪಿ.ಕೆ., ರವಿ ಕೆ., ಎಚ್. ಮಾರುತಿ, ಪ್ರಧಾನ ವ್ಯವಸ್ಥಾಪಕ ಕೆ.ಎನ್. ಕೃಷ್ಣಯ್ಯಶೆಟ್ಟಿ, ಸಲಹೆಗಾರ ಬಿ.ಆರ್. ನಾಗರಾಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.