ADVERTISEMENT

ಮಾಹಿತಿ ನೀಡದ ಸುಧಾ ಮೂರ್ತಿ: ಪತ್ರ ಸೋರಿಕೆಯಾಗಿದ್ದು ಹೇಗೆ? ಸುರೇಶ್‌ ಕುಮಾರ್

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 19:28 IST
Last Updated 16 ಅಕ್ಟೋಬರ್ 2025, 19:28 IST
<div class="paragraphs"><p>ಎಸ್‌.ಸುರೇಶ್‌ ಕುಮಾರ್</p></div>

ಎಸ್‌.ಸುರೇಶ್‌ ಕುಮಾರ್

   

ಬೆಂಗಳೂರು: ‘ಇನ್ಫೊಸಿಸ್‌ನ ನಾರಾಯಣಮೂರ್ತಿ ಮತ್ತು ಸುಧಾ ಮೂರ್ತಿ ಅವರು ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡುವುದಿಲ್ಲ ಎಂದು ನಿರಾಕರಿಸಿ ಸ್ವಯಂ ದೃಢೀಕರಿಸಿದ್ದ ಪತ್ರವು ಸೋರಿಕೆಯಾಗಿದ್ದು ಹೇಗೆ’ ಎಂದು ಬಿಜೆಪಿ ಶಾಸಕ ಎಸ್‌.ಸುರೇಶ್‌ ಕುಮಾರ್ ಪ್ರಶ್ನಿಸಿದ್ದಾರೆ.

ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಸಮೀಕ್ಷೆಗೆ ವಿರೋಧ ವ್ಯಕ್ತವಾದಾಗ ಮತ್ತು ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸುವಾಗ ರಾಜ್ಯ ಸರ್ಕಾರವು, ‘ಸಮೀಕ್ಷೆಯ ವಿವರಗಳನ್ನು ಗೌಪ್ಯವಾಗಿ ಇಡಲಾಗುವುದು’ ಎಂದು ಹೇಳಿತ್ತು. ಈಗ ಈ ಪತ್ರ ಸೋರಿಕೆಯಾಗಿದ್ದು ಹೇಗೆ ಎಂಬುದನ್ನು ಸರ್ಕಾರ ವಿವರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

‘ಇದು ರಾಜ್ಯದ ಜನರಿಗೆ, ನ್ಯಾಯಾಲಯಕ್ಕೆ ಬಗೆದ ದ್ರೋಹ. ನಾರಾಯಣಮೂರ್ತಿ ಅವರ ಕುಟುಂಬದ ಖಾಸಗಿತನಕ್ಕೆ ಸರ್ಕಾರ ಧಕ್ಕೆ ತಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟೀಕರಣ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.