ಬೆಂಗಳೂರು: ‘ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಅವರ ಅಭಿನಂದನಾ ಗ್ರಂಥಕ್ಕೆ ಸೂಕ್ತ ಹೆಸರು ಸೂಚಿಸಬೇಕು’ ಎಂದು ವಿ.ಗೋಪಾಲಗೌಡ ಅಭಿನಂದನಾ ಸಮಿತಿ ಸಂಚಾಲಕ ಎಂ.ಎನ್. ಪಿಳ್ಳಪ್ಪ ಮನವಿ ಮಾಡಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ವಿ. ಗೋಪಾಲಗೌಡ ಅವರ ಅಭಿಮಾನಿಗಳು, ಹಿರಿಯ ವಕೀಲರು, ಸಮಾಜದ ಮುಖಂಡರು ಅಭಿನಂದನಾ ಸಮಿತಿ ರಚಿಸಿದ್ದಾರೆ. ನಂಜುಂಡಸ್ವಾಮಿ ಸಂಪಾದಕತ್ವದಲ್ಲಿ ಅಭಿನಂದನಾ ಗ್ರಂಥ ರಚನೆಯ ಕೆಲಸ ಈಗಾಗಲೇ ಪ್ರಾರಂಭವಾಗಿದೆ. ಈ ಗ್ರಂಥಕ್ಕೆ ಸಾರ್ವಜನಿಕರು ಸೂಕ್ತ ಹೆಸರು ಸೂಚಿಸಬೇಕು’ ಎಂದು ಹೇಳಿದರು.
‘ಅಭಿನಂದನಾ ಗ್ರಂಥ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡ ಭಾಷೆಯಲ್ಲಿ ಬರೆದಿರುವ ಗ್ರಂಥ ಕರ್ನಾಟಕದಲ್ಲಿ ಬಿಡುಗಡೆಯಾದರೆ, ಹಿಂದಿ ಭಾಷೆಯ ಗ್ರಂಥ ಒಡಿಶಾ ರಾಜ್ಯದಲ್ಲಿ ಬಿಡುಗಡೆಯಾಗಲಿದೆ. ಇಂಗ್ಲಿಷ್ ಭಾಷೆಯ ಗ್ರಂಥವನ್ನು ದೆಹಲಿಯಲ್ಲಿ ಬಿಡುಗಡೆ ಮಾಡಲಾಗುವುದು. ಆದ್ದರಿಂದ, ಅಭಿನಂದನಾ ಗ್ರಂಥಕ್ಕೆ ಸೂಕ್ತ ಹೆಸರನ್ನು ಇದೇ 30ರೊಳಗೆ 99454 31926 ಮೊಬೈಲ್ ಸಂಖ್ಯೆಗೆ ಕಳುಹಿಸಬಹುದು ಅಥವಾ ಪತ್ರದ ಮೂಲಕ #520, ಎಂಟನೇ ಮುಖ್ಯರಸ್ತೆ, ಪೋಸ್ಟ್ ಆಫೀಸ್ ರಸ್ತೆ, ಸದಾಶಿವನಗರ, ಬೆಂಗಳೂರು–560080 ಈ ವಿಳಾಸಕ್ಕೆ ಕಳಿಸಬಹುದು’ ಎಂದು ಹೇಳಿದರು.
ವೀರಶೈವ ಸಂಘದ ಸದಸ್ಯ ಮೃತ್ಯುಂಜಯಸ್ವಾಮಿ, ವಕೀಲ ಶಿವಶಂಕರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.