ADVERTISEMENT

‘ಸುನಾದ’ ಕಿವುಡು ಮಕ್ಕಳ ಶಾಲೆಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 19:19 IST
Last Updated 20 ಜುಲೈ 2019, 19:19 IST

ಬೆಂಗಳೂರು: ಡಾ.ಎಸ್.ಆರ್. ಚಂದ್ರಶೇಖರ್ ಸ್ಮಾರಕ ವಾಕ್ ಶ್ರವಣ ಸಂಸ್ಥೆ ನಡೆಸುತ್ತಿರುವ ‘ಸುನಾದ ಕಿವುಡು ಮಕ್ಕಳ ಶಾಲೆ’ ಎಲ್ಡ್ರಾಕ್‌ ಇಂಡಿಯಾ ಕೆ–12 ಪ್ರಶಸ್ತಿ ಪಡೆದುಕೊಂಡಿದೆ.

ನಗರದಲ್ಲಿ ನಡೆದ ಸಮಾರಂಭದಲ್ಲಿಎಲ್ಡ್ರಾಕ್‌ ಇಂಡಿಯಾ ಕೆ–12ರ ನಿರ್ದೇಶಕ ಗುರುದೀಪ್ ಅಗರವಾಲ್ ಅವರುಡಾ.ಎಸ್.ಆರ್. ಚಂದ್ರಶೇಖರ್ ಸ್ಮಾರಕ ವಾಕ್ ಶ್ರವಣ ಸಂಸ್ಥೆಯಅಧ್ಯಕ್ಷ ಡಾ.ಎಂ.ಎಸ್. ವೆಂಕಟೇಶ್‍ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಡಾ.ಎಸ್.ಆರ್. ಚಂದ್ರಶೇಖರ್ ಸ್ಮಾರಕ ವಾಕ್ ಶ್ರವಣ ಸಂಸ್ಥೆಯು ಲಿಂಗರಾಜಪುರದಲ್ಲಿ 1987ರಿಂದ ಸುನಾದ ಕಿವುಡು ಮಕ್ಕಳ ಶಾಲೆ ನಡೆಸುತ್ತಿದ್ದು, 200 ಮಕ್ಕಳಿಗೆ ವಾಕ್ ಶ್ರವಣ ತರಬೇತಿ ಸೇರಿದಂತೆ ಪೂರ್ವ ಪ್ರಾಥಮಿಕ ಶಾಲೆಯಿಂದ 10ನೇ ತರಗತಿಯವರೆಗೆ ಶಿಕ್ಷಣ ನೀಡುತ್ತಿದೆ.

ADVERTISEMENT

ಸುನಾದ ಕಿವುಡು ಮಕ್ಕಳ ಶಾಲೆಯಲ್ಲಿ ಸುಸಜ್ಜಿತ ಗ್ರಂಥಾಲಯ, ಪ್ರಯೋಗಾಲಯ, ಸಭಾಂಗಣವಿದೆ. ಎಲ್ಲಾ ಮಕ್ಕಳಿಗೆ ಪಠ್ಯ ಶಿಕ್ಷಣದ ಜೊತೆಗೆ ಉಚಿತ ಶ್ರವಣಯಂತ್ರ, ವಾಕ್ ಶ್ರವಣ ತರಬೇತಿ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.