ADVERTISEMENT

ಶಾಸಕ ಸತೀಶ್ ರೆಡ್ಡಿ ಕೊಲೆಗೆ ಸುಪಾರಿ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 5:57 IST
Last Updated 16 ಫೆಬ್ರುವರಿ 2023, 5:57 IST
ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ
ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ   

ಬೆಂಗಳೂರು: ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ ಕೊಲೆಗೆ ಸಂಚು ರೂಪಿಸಿದ ಆರೋಪದ ಮೇರೆಗೆ ಇಬ್ಬರು ಆರೋಪಿಗಳನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಆಕಾಶ್‌ ಹಾಗೂ ಗಿರೀಶ್‌ ಎಂಬುವರನ್ನು ಬಂಧಿಸಲಾಗಿದೆ.

‘ಶಾಸಕರ ಹತ್ಯೆಗೆ ಸುಪಾರಿ ನೀಡ ಲಾಗಿದೆ’ ಎಂದು ಆರೋಪಿಸಿ ಶಾಸಕರ ಆಪ್ತ ಸಹಾಯಕ ಹರೀಶ್ ಬಾಬು ದೂರು ನೀಡಿದ್ದರು. ಆದರೆ, ಪೊಲೀಸರು ಎನ್‌ಸಿಆರ್‌ ಮಾಡಿಕೊಂಡಿದ್ದರು. ಆ ಕ್ರಮ ಪ್ರಶ್ನಿಸಿ ದೂರುದಾರರು ನ್ಯಾಯಾ ಲಯದ ಮೆಟ್ಟಿಲೇರಿದ್ದರು. ಸಿಎಂಎಂ ನ್ಯಾಯಾಲಯವು ಎನ್‌ಸಿಆರ್‌ ಪ್ರಕರಣ ವನ್ನು ಪರಿವರ್ತಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಆದೇಶಿಸಿದ ಬೆನ್ನಲ್ಲೇ ಇಬ್ಬರನ್ನು ಬಂಧಿಸಲಾಗಿದೆ.

ADVERTISEMENT

ವಿಲ್ಸನ್‌ ಗಾರ್ಡನ್‌ ನಾಗ ಹಾಗೂ ಅಶೋಕ್‌ ಮತ್ತಿತರರು ಎಂದು ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಆಡಿಯೊ ಆಧರಿಸಿ ಬಂಧಿಸ ಲಾಗಿದೆ. ಬಂಧಿತರ ವಿಚಾರಣೆ ನಡೆಸ ಲಾಗುತ್ತಿದೆ. ಸದ್ಯಕ್ಕೆ ಹೆಚ್ಚಿನ ವಿವರ ತಿಳಿಸಲು ಸಾಧ್ಯವಿಲ್ಲ’ ಎಂದು ಡಿಸಿಪಿ ಬಾಬಾ ತಿಳಿಸಿದ್ದಾರೆ.

‘ಫೆಬ್ರುವರಿ 3ರಂದು ಬೊಮ್ಮನಹಳ್ಳಿಯ ಚಂದ್ರು ಎಂಬಾತ ಕರೆ ಮಾಡಿ, ‘ಶಾಸಕರ ಕೊಲೆಗೆ ಸಂಚು ನಡೆದಿದೆ. ಹೊಳಲ್ಕೆರೆಯ ಆಕಾಶ್‌ ಎಂಬಾತ ತಿಳಿಸಿ ದ್ದಾನೆ. ಕೊಲೆಗೆ ₹ 2 ಕೋಟಿಗೆ ಸುಪಾರಿ ಕೊಡಲಾಗಿದೆ’ ಎಂದೂ ತಿಳಿಸಿದ್ದ. ಸುಪಾರಿ ಪಡೆದವನ ಭಾವಚಿತ್ರವನ್ನೂ ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸಿದ್ದ. ಆ ಫೋಟೊ ಪರಿಶೀಲಿಸಿದಾಗ ವಿಲ್ಸನ್‌ ಗಾರ್ಡನ್‌ ನಾಗ ಎಂದು ಗೊತ್ತಾಯಿತು’ ಎಂದು ಆಪ್ತ ಸಹಾಯಕ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.