ADVERTISEMENT

ಬರ್ಲಿ ಸ್ಟ್ರೀಟ್‌ಗೆ ಕಿರ್ಮಾನಿ ಹೆಸರಿಡಲು ಡಿ.ಕೆ. ಶಿವಕುಮಾರ್‌ಗೆ ಮನವಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 21:22 IST
Last Updated 18 ಅಕ್ಟೋಬರ್ 2025, 21:22 IST
<div class="paragraphs"><p>ಡಿ.ಕೆ ಶಿವಕುಮಾರ್‌</p></div>

ಡಿ.ಕೆ ಶಿವಕುಮಾರ್‌

   

ಫೇಸ್‌ಬುಕ್‌ ಚಿತ್ರ

ಬೆಂಗಳೂರು: ಬರ್ಲಿ ಸ್ಟ್ರೀಟ್‌ಗೆ ತನ್ನ ಹೆಸರು ಇಡುವಂತೆ ಮಾಜಿ ಕ್ರಿಕೆಟಿಗ ಸೈಯದ್‌ ಕಿರ್ಮಾನಿ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಮನವಿ ಸಲ್ಲಿಸಿದ್ದಾರೆ.

ADVERTISEMENT

‘1971ರಿಂದ 1986ರ ವರೆಗೆ ಭಾರತೀಯ ಕ್ರಿಕೆಟಿಗನಾಗಿ ರಾಜ್ಯ ಮತ್ತು ದೇಶವನ್ನು ಪ್ರತಿನಿಧಿಸಿದ್ದೆ. ವಿಕೆಟ್ ಕೀಪರ್‌ ಆಗಿ ಒಂದೇ ಪಂದ್ಯದಲ್ಲಿ 6 ಆಟಗಾರರನ್ನು ಔಟ್‌ ಮಾಡಿದ ದಾಖಲೆ ನನ್ನ ಹೆಸರಲ್ಲಿದೆ. ಅದೇ ರೀತಿ ವಿಶ್ವಕಪ್‌ನಲ್ಲಿ ಐದು ಆಟಗಾರರನ್ನು ಔಟ್ ಮಾಡಿದ ದಾಖಲೆಯೂ ನನ್ನದಾಗಿದೆ. 1983ರ ವಿಶ್ವಕಪ್‌ ಗೆದ್ದ ತಂಡದ ಸದಸ್ಯನಾಗಿ ಅತ್ಯುತ್ತಮ ವಿಕೆಟ್‌ ಕೀಪರ್‌ ಪ್ರಶಸ್ತಿ ಪಡೆದಿದ್ದೆ. ಪದ್ಮಶ್ರೀ, ಅರ್ಜುನ ಪ್ರಶಸ್ತಿ, ಏಕಲವ್ಯ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳು ಸಂದಿವೆ’ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

‘ಕರ್ನಾಟಕದ ಹೆಮ್ಮೆಯ ಆಟಗಾರರಾದ ಜಿ.ಆರ್. ವಿಶ್ವನಾಥ್‌, ಇ.ಎ.ಎಸ್‌. ಪ್ರಸನ್ನ, ಅನಿಲ್‌ ಕುಂಬ್ಳೆ ಹೆಸರುಗಳನ್ನು ನಗರದ ವೃತ್ತಗಳಿಗೆ, ಬೀದಿಗಳಿಗೆ ಇಡುವ ಮೂಲಕ ಅವರ ಸಾಧನೆಗಳು ಶಾಶ್ವತವಾಗಿರುವಂತೆ ಮಾಡಲಾಗಿದೆ. ಅದೇ ರೀತಿ ನನ್ನ ಹೆಸರನ್ನು ಕೂಡಾ ಬರ್ಲಿ ಸ್ಟ್ರೀಟ್‌ಗೆ ಇಡುವ ಮೂಲಕ ಸಾಧಕರನ್ನು ಗೌರವಿಸುವ ಪರಂಪರೆಯನ್ನು ಮುಂದುವರಿಸಬೇಕು’ ಎಂದು ಕೇಳಿಕೊಂಡಿದ್ದಾರೆ.

ಕಿರ್ಮಾನಿಯವರ ಹೆಸರನ್ನು ಸ್ಟ್ರೀಟ್‌ಗೆ ಇಡಲು 2018ರಲ್ಲಿಯೇ ಬಿಬಿಎಂಪಿ ನಿರ್ಣಯ ಕೈಗೊಂಡಿತ್ತು. ಆದರೆ, ಅನುಷ್ಠಾನಕ್ಕೆ ಬಂದಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.