ADVERTISEMENT

ಪೈ ಇಂಟರ್‌ನ್ಯಾಷನಲ್‌ ಜತೆಗೆ ಟಿಸಿಎಲ್‌ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 19:42 IST
Last Updated 3 ಅಕ್ಟೋಬರ್ 2019, 19:42 IST

ಬೆಂಗಳೂರು:ಎಲೆಕ್ಟ್ರಾನಿಕ್ಸ್‌ ಹಾಗೂ ಗೃಹೋಪಯೋಗಿ ವಸ್ತುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ‘ಪೈ ಇಂಟರ್‌ನ್ಯಾಷನಲ್‌’ ಜತೆಗೆ ‘ಟಿಸಿಎಲ್‌ ಸಂಸ್ಥೆ’ಯು ‌ಮಾರಾಟದ ಒಪ್ಪಂದ ಮಾಡಿಕೊಂಡಿದೆ.

ಇಂದಿರಾನಗರದ ಪೈ ಶೋರೂಂನಲ್ಲಿ ಹೊಸ 4ಕೆ ಎ1 ಟಿಸಿಎಲ್‌ ಟಿ.ವಿಯನ್ನು ಬಿಡುಗಡೆ ಮಾಡುವ ಮೂಲಕ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜ್‌ಕುಮಾರ್‌ ಪೈ ಹಾಗೂ ಭಾರತ ಟಿಸಿಎಲ್‌ ಸಂಸ್ಥೆಯ ಮುಖ್ಯಸ್ಥ ಮೈಕ್‌ ಚೆನ್‌ ಒಪ್ಪಂದ ಮಾಡಿಕೊಂಡರು. ಇದರಿಂದಾಗಿ ಎಲ್ಲ ಪೈ ಇಂಟರ್‌ನ್ಯಾಷನಲ್‌ ಮಳಿಗೆಗಳಲ್ಲಿಟಿಸಿಎಲ್‌ ಸಂಸ್ಥೆಯ ಟಿ.ವಿಗಳು ಗ್ರಾಹಕರಿಗೆ ಲಭ್ಯವಿರಲಿವೆ.

ಟಿಸಿಎಲ್‌ ಸಂಸ್ಥೆಯ ಭಾರತದ ಮುಖ್ಯಸ್ಥ ಮೈಕ್‌ ಚೆನ್‌ ಮಾತನಾಡಿ, ‘ಟಿವಿ ಮಾರಾಟ ಉದ್ಯಮದಲ್ಲಿ ಟಿಸಿಎಲ್‌ ಜಾಗತಿಕ ಮಟ್ಟದಲ್ಲಿ2ನೇ ಸ್ಥಾನದಲ್ಲಿದೆ. 2022ರ ವೇಳೆಗೆ ಮೊದಲನೇ ಸ್ಥಾನಕ್ಕೆ ಏರುವ ಗುರಿ ಹೊಂದಿದೆ. ಇನ್ನು ಭಾರತದಲ್ಲಿ 5ನೇ ಸ್ಥಾನದಲ್ಲಿದ್ದು, ದೀಪಾವಳಿ ಹಬ್ಬದ ವೇಳೆಗೆ 4ನೇ ಸ್ಥಾನಕ್ಕೆ ಬರುವ ನಿರೀಕ್ಷೆ ಇದೆ. ದೀರ್ಘ‌ ಕಾಲದ ಬಾಳಿಕೆಯ ದೃಷ್ಟಿ ಇಟ್ಟುಕೊಂಡು ಟಿವಿಯನ್ನು ಉತ್ಪಾದಿಸುತ್ತಿದ್ದೇವೆ’ ಎಂದು ತಿಳಿಸಿದರು.

ADVERTISEMENT

ರಾಜ್‌ಕುಮಾರ್‌ ಪೈ, ‘ಟಿವಿ ಮಾರಾಟದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಟಿಸಿಎಲ್‌ ಜತೆ ಮಾರಾಟ ಒಪ್ಪಂದ ಮಾಡಿಕೊಂಡಿರುವುದು ಖುಷಿಯಾಗಿದೆ. ಟಿಸಿಎಲ್‌ ಟಿವಿ ಖರೀದಿಸಿದರೆ ಗ್ರಾಹಕರಿಗೆ ಬಂಪರ್‌ ಪ್ರಶಸ್ತಿ ಗೆಲ್ಲುವ ಅವಕಾಶವಿದೆ’ ಎಂದು ಮಾಹಿತಿ ನೀಡಿದರು.

‘ಕಳೆದ ಸೆಪ್ಟೆಂಬರ್‌ 28ರಿಂದ ಮೆಗಾ ಫೆಸ್ಟಿವಲ್‌ ಸೇಲ್‌ ಮುಂದಿನ ನವೆಂಬರ್‌ವರೆಗೂ ನಡೆಯಲಿದೆ. ಈ ವೇಳೆ ಪೈ ಇಂಟರ್‌ನ್ಯಾಷನಲ್‌ನ ಯಾವುದೇ ಮಳಿಗೆಯಲ್ಲಿ ಕನಿಷ್ಠ ₹ 2 ಸಾವಿರ ಮೌಲ್ಯದ ವಸ್ತುಗಳನ್ನು ಖರೀದಿಸಿದಲ್ಲಿ ಒಂದು ಲಕ್ಕಿ ಡ್ರಾ ಕೂಪನ್‌ ಲಭ್ಯವಾಗಲಿದೆ. ನವೆಂಬರ್‌ನಲ್ಲಿ ಸೇಲ್‌ ಮುಗಿದ ಬಳಿಕ ಕೂಪನ್‌ ಪಡೆದ ಗ್ರಾಹಕರಿಗೆ ಲಕ್ಕಿ ಡ್ರಾ ನಡೆಸಿ, ಅದೃಷ್ಟ ಶಾಲಿ ಬಹುಮಾನ ವಿತರಿಸಲಾಗುತ್ತದೆ’ ಎಂದರು.

ಬಹುಮಾನ ಘೋಷಣೆ:ಒಪ್ಪಂದದ ಹಿನ್ನೆಲೆ ಪೈ ಇಂಟರ್‌ನ್ಯಾಷನಲ್‌ ಮಳಿಗೆಗಳಲ್ಲಿ ಟಿಸಿಎಲ್‌ ಸಂಸ್ಥೆಯ ಟಿ.ವಿಯನ್ನು ಖರೀದಿಸುವ ಅದೃಷ್ಟ ಶಾಲಿ ಗ್ರಾಹಕರಿಗೆ ಬಹುಮಾನ ಘೋಷಿಸಲಾಗಿದೆ.

ಮೊದಲನೆ ಬಹುಮಾನವಾಗಿ 164 ಸೆ.ಮೀ. ಟಿಸಿಎಲ್‌ 4ಕೆ ಎ1 ಟಿವಿ, ಎರಡನೇ ಬಹುಮಾನವಾಗಿ 138.7 ಸೆ.ಮೀ. ಟಿಸಿಎಲ್‌ 4ಕೆ ಎ1 ಟಿವಿ, ಮೂರನೇ ಬಹುಮಾನವಾಗಿ 108 ಸೆ.ಮೀ ಟಿಸಿಎಲ್‌ 4ಕೆ ಎ1 ಟಿವಿ ಹಾಗೂ ನಾಲ್ಕನೇ ಬಹುಮಾನವಾಗಿ 100 ಅದೃಷ್ಟ ಶಾಲಿ ಗ್ರಾಹಕರಿಗೆ ಬ್ಲೂಟೂತ್‌ ಸ್ಪೀಕರ್‌ಗಳನ್ನು ಇಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.