ADVERTISEMENT

ಅತ್ಯುತ್ತಮ ಶಿಕ್ಷಕರಿಗೆ ‘ರುಪ್ಸ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 19:03 IST
Last Updated 28 ಸೆಪ್ಟೆಂಬರ್ 2021, 19:03 IST

ಬೆಂಗಳೂರು: ಸರ್ಕಾರಿ ಶಾಲೆಗಳ ಉತ್ತಮ ಶಿಕ್ಷಕರನ್ನು ಪ್ರತಿವರ್ಷ ಗುರುತಿಸಿ ‘ಶಿಕ್ಷಕ ದಿನ’ದಂದು (ಸೆ. 5) ರಾಜ್ಯ ಸರ್ಕಾರ ಸನ್ಮಾನಿಸುತ್ತದೆ. ಆದರೆ, ಖಾಸಗಿ ಶಾಲೆಗಳ ಶಿಕ್ಷಕರಿಗೆ ಆ ಭಾಗ್ಯ ಇಲ್ಲ. ಈ ತಾರತಮ್ಯ ನಿವಾರಿಸಲು ನೋಂದಾಯಿತ ಖಾಸಗಿ ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ರುಪ್ಸ) ತೀರ್ಮಾನಿಸಿದೆ.

ರಾಜ್ಯದ ಎಲ್ಲ ಶೈಕ್ಷಣಿಕಜಿಲ್ಲೆಗಳಿಂದ ಒಬ್ಬ ಅರ್ಹ ಶಿಕ್ಷಕನನ್ನು ಗುರುತಿಸಿ ‘ರುಪ್ಸ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’ ನೀಡಿ ಸನ್ಮಾನಿಸಲು ಸಂಘಟನೆ ಮುಂದಾಗಿದೆ. ನಾಗದೇವನಹಳ್ಳಿಯಲ್ಲಿರುವ ಸಾಂದೀ‍ಪನಿ ಹೈಟೆಕ್ ಶಾಲೆಯಲ್ಲಿ ಇದೇ 29ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಮತ್ತು ಸಹಕಾರ ಸಚಿವ ಎಸ್‌. ಟಿ. ಸೋಮಶೇಖರ್‌ ಈ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನಮಾಡಲಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರು: ಜಯಂತಿ ಫಣಿರಾಜ್‌ (ಬೆಂಗಳೂರು ಉತ್ತರ), ಫ್ರಾನ್ಸಿಸ್ ಅಂಥೋನಿ (ಬೆಂಗಳೂರು ದಕ್ಷಿಣ), ಪ್ರಕಾಶ್‌ (ತುಮಕೂರು), ಟಿ. ಮುತ್ತುಸ್ವಾಮಿ (ರಾಮನಗರ), ಟಿ.ಎನ್‌. ಪದ್ಮಾವತಿ (ಕೋಲಾರ), ಎನ್‌.ಆರ್‌. ಗೋಪಿನಾಥ್ (ಚಿಕ್ಕಬಳ್ಳಾಪುರ), ಯು.ಎನ್‌. ಸವಿತಾ (ಮಂಡ್ಯ), ಕೆ.ಎಂ. ಗೋಪಿನಾಥ್‌ (ಮೈಸೂರು), ರಮೇಶ್‌ (ಚಾಮರಾಜನಗರ), ಕೆ.ಎಸ್‌. ಪ್ರಭುದಾಸ್‌
(ದಾವಣಗೆರೆ), ವಿನ್ಸೆಂಟ್‌ ಡಿ ಕೋಸ್ಟಾ (ಮಂಗಳೂರು),
ಭಾಸ್ಕರ್‌ (ಉಡುಪಿ), ಪೂಜಾ ಉಲ್ವಾಕರ್‌ (ಉತ್ತರ ಕನ್ನಡ), ಜಿ.ಎಸ್‌. ದೇಸಾಯಿ (ಹಾವೇರಿ), ಬಿ.ಆರ್‌. ಸಂತೋಷ್‌ (ಶಿವಮೊಗ್ಗ), ಆರ್‌. ಮೈಲುಸ್ವಾಮಿ (ಚಿತ್ರದುರ್ಗ), ಇಂದುಮತಿ ಬಿ. ಅಂಗಡಿ (ಗದಗ), ಮಂಜುನಾಥ್‌ ಎಸ್‌. ಪೂಜಾರಿ (ವಿಜಯಪುರ), ವೀರೇಶ್‌ ನಿಂಗಪ್ಪ ಗಾಣಿಗೇರ (ಧಾರವಾಡ), ಟಿ. ಇ. ಸುಲೇಹತ್‌ (ಕೊಡಗು),
ವಿಮಲಾ ಡಿ ನಾಯಕ್‌ (ಬೆಳಗಾವಿ–1), ಚೇತನಾ ಎಸ್‌. ಪಾಟೀಲ (ಬೆಳಗಾವಿ–2), ಎಂ. ರಾಜು ನಾಯಕ್‌ (ವಿಜಯನಗರ), ಬಿ.ಎನ್‌. ರಮೇಶ್‌ ಬೋಂಗಲೆ (ಚಿಕ್ಕಮಗಳೂರು), ಎಸ್‌.ಎಂ. ಮಲ್ಲಿಕಾರ್ಜುನ (ಹೊಸಪೇಟೆ), ಜಾತಪ್ಪ ತಲಕಲ್ಲು (ರಾಯಚೂರು), ಮಹಾಲಕ್ಷಿ ಪಾಟೀಲ ಮತ್ತು ಗುತ್ತಯ್ಯ (ಯಾದಗಿರಿ), ಸವಿತಾ (ಕಲಬುರ್ಗಿ), ರವೀಂದ್ರ (ಬೀದರ್‌), ಸಂತೋಷ್‌ ಚನ್ನಪ್ಪ ಬಿರಾದಾರ (ಶಿರಸಿ), ಎಸ್.ಎಸ್‌.ಚೌಗಲ
(ಬಾಗಲಕೋಟೆ).

ADVERTISEMENT

***

ಖಾಸಗಿ ಶಾಲೆಗಳ ಶಿಕ್ಷಕರನ್ನೂ ಪ್ರಶಸ್ತಿಗೆ ಪರಿಗಣಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ರಾಜ್ಯ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ, ನಾವು ಪ್ರಶಸ್ತಿ ನೀಡುತ್ತಿದ್ದೇವೆ

- ಲೋಕೇಶ್‌ ತಾಳಿಕಟ್ಟೆ,ಅಧ್ಯಕ್ಷ, ರುಪ್ಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.