ADVERTISEMENT

ಶಿಕ್ಷಕರು ಮರೆವು ತೊಲಗಿಸಿ ಅರಿವು ಮೂಡಿಸಲಿ: ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ

ಕೆ. ಖಾದ್ರಿ ನರಸಿಂಹಯ್ಯ ಅವರಿಗೆ ‘ಸಾವಿತ್ರಿಬಾಯಿ ಫುಲೆ ಹಾಗೂ ಜ್ಯೋತಿ ಬಾ ಫುಲೆ’ ಪ್ರಶಸ್ತಿ ಪ್ರದಾನ 

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 16:16 IST
Last Updated 6 ಸೆಪ್ಟೆಂಬರ್ 2025, 16:16 IST
ಕಾರ್ಯಕ್ರಮದಲ್ಲಿ ಕೆ. ಖಾದ್ರಿ ನರಸಿಂಹಯ್ಯ ಅವರಿಗೆ ‘ಸಾವಿತ್ರಿಬಾಯಿ ಫುಲೆ ಹಾಗೂ ಜ್ಯೋತಿ ಬಾ ಫುಲೆ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಸ್.ಜಿ. ಸಿದ್ಧರಾಮಯ್ಯ, ರಾಜಶೇಖರ ಮಠಪತಿ, ಎ.ಎಸ್.‌ ನಾಗರಾಜಸ್ವಾಮಿ, ಡಿ.ಆರ್. ಪಾಟೀಲ, ಎಂ. ಪ್ರಕಾಶಮೂರ್ತಿ, ತಾ.ಸಿ. ತಿಮ್ಮಯ್ಯ, ಇಂದಿರಾಶರಣ್‌ ಜಮ್ಮಲದಿನ್ನಿ, ಪಿ.ಆರ್.‌ ಪ್ರಭು ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಕೆ. ಖಾದ್ರಿ ನರಸಿಂಹಯ್ಯ ಅವರಿಗೆ ‘ಸಾವಿತ್ರಿಬಾಯಿ ಫುಲೆ ಹಾಗೂ ಜ್ಯೋತಿ ಬಾ ಫುಲೆ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಸ್.ಜಿ. ಸಿದ್ಧರಾಮಯ್ಯ, ರಾಜಶೇಖರ ಮಠಪತಿ, ಎ.ಎಸ್.‌ ನಾಗರಾಜಸ್ವಾಮಿ, ಡಿ.ಆರ್. ಪಾಟೀಲ, ಎಂ. ಪ್ರಕಾಶಮೂರ್ತಿ, ತಾ.ಸಿ. ತಿಮ್ಮಯ್ಯ, ಇಂದಿರಾಶರಣ್‌ ಜಮ್ಮಲದಿನ್ನಿ, ಪಿ.ಆರ್.‌ ಪ್ರಭು ಉಪಸ್ಥಿತರಿದ್ದರು   

ಬೆಂಗಳೂರು: ‘ನಮಗೆ ಅರಿವಿದ್ದರೂ ಮರೆವು ಆವರಿಸಿಕೊಂಡಿದೆ. ಶಿಕ್ಷಕರಾದವರು ಮರೆವನ್ನು ತೊಲಗಿಸಿ, ಅರಿವು ಮೂಡಿಸುವವರಾಗಬೇಕು’ ಎಂದು ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ ಹೇಳಿದರು.

ಕನ್ನಡ ಸಂಘರ್ಷ ಸಮಿತಿ ನಗರದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಕೆ. ಖಾದ್ರಿ ನರಸಿಂಹಯ್ಯ ಅವರಿಗೆ ‘ಸಾವಿತ್ರಿಬಾಯಿ ಫುಲೆ ಹಾಗೂ ಜ್ಯೋತಿ ಬಾ ಫುಲೆ’ ಪ್ರಶಸ್ತಿ ಪ್ರದಾನ ಮಾಡಿ, ಮಾತನಾಡಿದರು.

‘ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸಬೇಕಾದ ಆದರ್ಶಪ್ರಾಯರಾಗಬೇಕು. ಅವರಿಗೆ ಮಾತೃ ಹೃದಯವಿರಬೇಕು. ಸರ್ವಪಲ್ಲಿ ರಾಧಾಕೃಷ್ಣನ್ ಅವರು ರಾಷ್ಟ್ರಪತಿಯಾದರೂ, ತಾನೊಬ್ಬ ಶಿಕ್ಷಕ ಎಂಬುದನ್ನು ಮರೆಯಲಿಲ್ಲ. ಸಮಾಜದಲ್ಲಿ ಶಿಕ್ಷಕನಿಗೆ ಇರಬೇಕಾದ ಗೌರವದ ದ್ಯೋತಕವಾಗಿ ತಮ್ಮ ಜನ್ಮದಿನವನ್ನು ಶಿಕ್ಷಕ ದಿನಾಚರಣೆಯಾಗಿ ಆಚರಿಸಲು ಅನುವು ಮಾಡಿಕೊಟ್ಟ ಆದರ್ಶ ಪುರುಷ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಸಾಹಿತಿ ರಾಜಶೇಖರ ಮಠಪತಿ, ‘ಸಾವಿತ್ರಿಬಾಯಿ ಫುಲೆ ಹಾಗೂ ಜ್ಯೋತಿ ಬಾ ಫುಲೆ ಅವರು ಸಮಾಜದಲ್ಲಿ ಕ್ರಾಂತಿ ಮಾಡಿದ ಮಹಾ ಆದರ್ಶಪ್ರಾಯರಾಗಿದ್ದಾರೆ. ಶೋಷಿತರಿಗೆ ಹಾಗೂ ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರೆಯುವಂತೆ ಮಾಡಿದ ಅವರ ಹೋರಾಟದ ದಾರಿ ಸುಗಮವಾಗಿರಲಿಲ್ಲ. ಅಡೆತಡೆಗಳಿಗೆ ಎದೆಗುಂದದೇ ಗುರಿಯ ಸಾಧನೆಗಾಗಿ ಜೀವನವನ್ನು ಸಮರ್ಪಿಸಿದರು’ ಎಂದು ಸ್ಮರಿಸಿಕೊಂಡರು. 

ಸಮಿತಿಯ ಅಧ್ಯಕ್ಷ ಎ.ಎಸ್.‌ ನಾಗರಾಜಸ್ವಾಮಿ, ‘ಶಿಕ್ಷಕರ ದಿನಾಚರಣೆ ಮೂಲಕ ಆದರ್ಶಪ್ರಾಯರನ್ನು ಸ್ಮರಿಸಿಕೊಳ್ಳಲಾಗುತ್ತಿದೆ’ ಎಂದರು. 

ಮಾಜಿ ಶಾಸಕ ಡಿ.ಆರ್. ಪಾಟೀಲ, ಕನ್ನಡ ಸಂಘರ್ಷ ಸಮಿತಿ ಕಾರ್ಯಾಧ್ಯಕ್ಷ ಎಂ. ಪ್ರಕಾಶಮೂರ್ತಿ, ಪ್ರಧಾನ ಕಾರ್ಯದರ್ಶಿ ತಾ.ಸಿ. ತಿಮ್ಮಯ್ಯ, ಕಾರ್ಯದರ್ಶಿ ಇಂದಿರಾ ಶರಣ್‌ ಜಮ್ಮಲದಿನ್ನಿ, ಕಾರ್ಯಕಾರಿ ಸದಸ್ಯ ಪಿ.ಆರ್.‌ ಪ್ರಭು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.