ADVERTISEMENT

ನಮ್ಮ ಮೆಟ್ರೊ ಪ್ರಯಾಣ ದರ ಏರಿಕೆ: ಸಂಸತ್‌ನಲ್ಲಿ ಧ್ವನಿಯೆತ್ತಿದ ತೇಜಸ್ವಿ ಸೂರ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಫೆಬ್ರುವರಿ 2025, 10:36 IST
Last Updated 11 ಫೆಬ್ರುವರಿ 2025, 10:36 IST
<div class="paragraphs"><p>ತೇಜಸ್ವಿ ಸೂರ್ಯ</p></div>

ತೇಜಸ್ವಿ ಸೂರ್ಯ

   

ನವದೆಹಲಿ: ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಸಂಸತ್‌ನಲ್ಲಿ ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೊ ಪ್ರಯಾಣದ ದರ ಏರಿಕೆಯ ವಿರುದ್ಧ ವಿರೋಧ ವ್ಯಕ್ತಪಡಿಸಿ ಧ್ವನಿಯೆತ್ತಿದ್ದಾರೆ.

ಸಂಸತ್‌ನ ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ‘ಮೆಟ್ರೊ ರೈಲಿನಲ್ಲಿ ಕಡಿಮೆ ಅಂತರದ ದೂರ ಪ್ರಯಾಣ ಮಾಡುವವರೂ ಮೊದಲು ಪಾವತಿಸುವುದಕ್ಕಿಂತ ದ್ವಿಗುಣ ಹಣ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಮೆಟ್ರೊ ಬೆಲೆ ಏರಿಕೆ ಮಧ್ಯಮ ವರ್ಗದ ಜನರ ಮೇಲೆ ಗಂಭೀರ ಪರಿಣಾಮ ಬೀಳುತ್ತಿದೆ. ಕಡಿಮೆ ಅಂತರದ ಪ್ರಯಾಣ ಮಾಡುವವರಿಗೂ ಶೇ 100ರಷ್ಟು ಏರಿಕೆಯಾಗಿದೆ. ನಗರಕ್ಕೆ ಸುಸ್ಥಿರ ಸಾರ್ವಜನಿಕ ಸಾರಿಗೆಯಾಗುವ ಬದಲು ದರ ಏರಿಕೆಯಿಂದಾಗಿ ಮೆಟ್ರೊ ಸಂಪರ್ಕವಿರುವ ನಗರಗಳಲ್ಲೇ ಬೆಂಗಳೂರು ಮೆಟ್ರೊ ದುಬಾರಿಯಾಗಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಪ್ರಯಾಣದ ದರದ ವ್ಯತ್ಯಾಸವನ್ನು ಪರಿಶೀಲಿಸಿ, ಸಾಮಾನ್ಯ ಜನರಿಗೆ ಹೆಚ್ಚು ಕೈಗೆಟುಕುವಂತೆ ಮಾಡಲು ಟಿಕೆಟ್ ದರ ನಿಗದಿಪಡಿಸುವಂತೆ ಒತ್ತಾಯಿಸುತ್ತೇನೆ’ ಎಂದರು.

ನಂತರ, ಅವರು ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್‌ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.