ADVERTISEMENT

ಟೆಂಪೊ– ಕಾರು ಡಿಕ್ಕಿ: ರಸ್ತೆಯಲ್ಲೆಲ್ಲ ಮದ್ಯದ ಬಾಟಲಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 20:58 IST
Last Updated 6 ಮಾರ್ಚ್ 2023, 20:58 IST

ಬೆಂಗಳೂರು: ಇನ್ಫೆಂಟ್ರಿ ರಸ್ತೆ ಬಳಿಯ ಕಾಫಿ ಬೋರ್ಡ್ ಎದುರಿನ ರಸ್ತೆಯಲ್ಲಿ ಟೆಂಪೊ ಹಾಗೂ ಕಾರು ನಡುವೆ ಸೋಮವಾರ ನಸುಕಿನಲ್ಲಿ ಅಪಘಾತ ಸಂಭವಿಸಿದ್ದು, ಚಾಲಕರು ಸೇರಿ ಮೂವರು ಗಾಯಗೊಂಡಿದ್ದಾರೆ.

‘ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದಾಗಿ ಅಪಘಾತ ಸಂಭವಿಸಿದೆ. ಇದರಿಂದಾಗಿ ಟೆಂಪೊ ಹಾಗೂ ಕಾರಿನ ಮುಂಭಾಗ ಭಾಗಶಃ ಜಖಂಗೊಂಡಿದೆ. ಎರಡೂ ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ಹೇಳಿದರು.

‘ಬಾರ್ ಹಾಗೂ ಪಬ್‌ಗಳಲ್ಲಿ ಸಂಗ್ರಹವಾಗಿದ್ದ ಕಸವನ್ನು ಟೆಂಪೊದಲ್ಲಿ ಸಾಗಿಸಲಾಗುತ್ತಿತ್ತು. ಎರಡೂ ವಾಹನಗಳ ಚಾಲಕರು ಹಾಗೂ ಕಾರಿನಲ್ಲಿದ್ದ ವ್ಯಕ್ತಿಯೊಬ್ಬರಿಗೆ ಗಾಯವಾಗಿದೆ’ ಎಂದರು.

ADVERTISEMENT

ಟೆಂಪೊದಲ್ಲಿದ್ದ ಕಸವೆಲ್ಲ ರಸ್ತೆಯಲ್ಲಿ ಬಿದ್ದಿತ್ತು. ಕಸದಲ್ಲಿ ಮದ್ಯದ ಬಾಟಲಿಗಳು ಹೆಚ್ಚಿದ್ದವು. ಇದರಿಂದಾಗಿ ಇತರೆ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು. ಪೊಲೀಸರು, ಸ್ವಚ್ಛತೆ ಕೆಲಸಗಾರರ ಸಹಾಯದಿಂದ ಬೇರೊಂದು ವಾಹನದಲ್ಲಿ ಕಸವನ್ನು ತುಂಬಿ ಸ್ಥಳದಿಂದ ಸಾಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.