ADVERTISEMENT

ನಾಳೆ ಬೆಂಗಳೂರಿಗೆ ನೆದರ್ಲೆಂಡ್‌ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2023, 21:04 IST
Last Updated 9 ಸೆಪ್ಟೆಂಬರ್ 2023, 21:04 IST
ನೆದರ್ಲೆಂಡ್‌ ಪ್ರಧಾನಿ ನಗರದ ಚರ್ಚ್‌ ಸ್ಟ್ರೀಟ್‌ಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಭದ್ರತೆ ವ್ಯವಸ್ಥೆಯ ಪರಿಶೀಲನೆ ಶನಿವಾರ ನಡೆಯಿತು.
ನೆದರ್ಲೆಂಡ್‌ ಪ್ರಧಾನಿ ನಗರದ ಚರ್ಚ್‌ ಸ್ಟ್ರೀಟ್‌ಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಭದ್ರತೆ ವ್ಯವಸ್ಥೆಯ ಪರಿಶೀಲನೆ ಶನಿವಾರ ನಡೆಯಿತು.   

ಬೆಂಗಳೂರು: ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ನೆದರ್ಲೆಂಡ್‌ ಪ್ರಧಾನಿ ಮಾರ್ಕ್ ರುಟ್ಟೆ ಅವರು ಸೆ.11ರಂದು (ಸೋಮವಾರ) ಬೆಂಗಳೂರಿಗೂ ಭೇಟಿ ನೀಡುತ್ತಿದ್ದಾರೆ.

ನಗರದಲ್ಲಿ ನಡೆಯುವ ’ಎಕನಾಮಿಕ್ಸ್‌ ಮಿಷನ್‌’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನೆದರ್ಲೆಂಡ್‌ ಕಾನ್ಸುಲೆಟ್‌ ಜನರಲ್‌ಗೂ ಭೇಟಿ ನೀಡಲಿದ್ದಾರೆ. ನೆದರ್ಲೆಂಡ್‌ ಜತೆಗೆ ವ್ಯಾಪಾರ ಸಂಬಂಧ ಹೊಂದಿರುವ ಭಾರತದ ಕಂಪನಿಗಳ ಪ್ರತಿನಿಧಿಗಳ ಜತೆಗೆ ಸಂವಾದ ನಡೆಸಲಿದ್ದಾರೆ. ಎನ್‌ಎಕ್ಸ್‌ಒ ಪ್ರಯೋಗಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಅದಾದ ಮೇಲೆ ದುಂಡುಮೇಜಿನ ಸಭೆಯಲ್ಲಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT