ADVERTISEMENT

ಬೆಂಗಳೂರು | ಆತ್ಮಹತ್ಯೆಗೆ ಯತ್ನಿಸಿದ ಬಾಲಕಿ ರಕ್ಷಿಸಿದ ಪೊಲೀಸ್ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 23:10 IST
Last Updated 9 ಅಕ್ಟೋಬರ್ 2024, 23:10 IST
   

ಬೆಂಗಳೂರು: ನಗರದ ಟ್ರಿನಿಟಿ ಜಂಕ್ಷನ್‌ ಬಳಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕಿಯನ್ನು ಮಹಿಳಾ ಪೊಲೀಸ್​ ಸಿಬ್ಬಂದಿ ಬುಧವಾರ ರಾತ್ರಿ ರಕ್ಷಿಸಿದ್ದಾರೆ.

ಪಿಎಸ್‌ಐ ಕವಿತಾ ಮತ್ತು ಕಾನ್‌ಸ್ಟೆಬಲ್‌ ಪಲ್ಲವಿ ಅವರು ಬಾಲಕಿಯನ್ನು ಅಪಾಯದಿಂದ ಕಾಪಾಡಿದ್ದು ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಟ್ರಿನಿಟಿ ಜಂಕ್ಷನ್​ನಲ್ಲಿ ಕವಿತಾ ಮತ್ತು ಪಲ್ಲವಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅದೇ ಸಂದರ್ಭದಲ್ಲಿ ಬಾಲಕಿಯೊಬ್ಬಳು ನಿತ್ರಾಣಗೊಂಡು ಕುಸಿದು ಬಿದ್ದಿರುವುದನ್ನು ಸಿಬ್ಬಂದಿ ಗಮನಿಸಿದ್ದರು. ತಕ್ಷಣವೇ ಪೊಲೀಸ್ ಸಿಬ್ಬಂದಿ ಆಕೆಯ ನೆರವಿಗೆ ಧಾವಿಸಿದ್ದರು.

ADVERTISEMENT

ಆಗ ಬಾಲಕಿ ‘ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು. ನನ್ನನ್ನು ಬಿಡಿ’ ಎಂದು ಚೀರಾಡುತ್ತಿದ್ದಳು. ಕೂಡಲೇ 112ಗೆ ಕರೆ ಮಾಡಿ ಮಾಹಿತಿ ನೀಡಿದ ಪೊಲೀಸ್ ಸಿಬ್ಬಂದಿ, ಬಾಲಕಿಯನ್ನು ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ ಎಂದು ಸಂಚಾರ ಪೂರ್ವ ಉಪ ಪೊಲೀಸ್ ಆಯುಕ್ತರ ‘ಎಕ್ಸ್‌’ ಖಾತೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.