ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದಲೇ ಮಾಸ್ಕ್‌

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 20:42 IST
Last Updated 18 ಜೂನ್ 2021, 20:42 IST
   

ಬೆಂಗಳೂರು: ಬದಲಾದ ಮಾದರಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಮುಂದಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಈ ಕುರಿತು ಶುಕ್ರವಾರ ಅಧಿಕೃತ ಆದೇಶ ಹೊರಡಿಸಿದೆ.

ಆರು ಪತ್ರಿಕೆಗಳ ಬದಲಿಗೆ, ಎರಡು ಪತ್ರಿಕೆಗಳ ಮೂಲಕ ಪರೀಕ್ಷೆ ನಡೆಯಲಿದೆ. ಮುಖ್ಯ ವಿಷಯಗಳ ಒಂದು ಪತ್ರಿಕೆ, ಭಾಷಾ ವಿಷಯಗಳ ಮತ್ತೊಂದು ಪತ್ರಿಕೆ ಇರಲಿದ್ದು, ಪ್ರತಿ ವಿಷಯಕ್ಕೆ ತಲಾ 40 ಅಂಕಗಳನ್ನು ನಿಗದಿ ಪಡಿಸಲಾಗಿದೆ.

’ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮದ ಶಾಲೆಗಳಲ್ಲಿ ಪೂರ್ವಸಿದ್ಧತಾ ಪರೀಕ್ಷೆ ನಡೆಸಲಾಗಿತ್ತು. ಆದರೆ, ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳು ಪೂರ್ವಸಿದ್ಧತಾ ಪರೀಕ್ಷೆಗಳನ್ನೂ ಬರೆದಿಲ್ಲ. ಹೀಗಾಗಿ, ಮುಖ್ಯ ಪರೀಕ್ಷೆಯನ್ನು ನಡೆಸಬೇಕಾಗಿದೆ’ ಎಂದೂ ಇಲಾಖೆ ಹೇಳಿದೆ.

ADVERTISEMENT

‘ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಮತ್ತು ಪರೀಕ್ಷಾ ಕಾರ್ಯದಲ್ಲಿ ತೊಡಗುವ ಶಿಕ್ಷಕರು, ಮೌಲ್ಯಮಾಪಕರು ಹಾಗೂ ಅಧಿಕಾರಿಗಳಿಗೆ ಇಲಾಖೆಯಿಂದಲೇ ಮಾಸ್ಕ್‌ ವಿತರಿಸಲಾಗುತ್ತದೆ. ಈ ಸಂಬಂಧ ಸುಮಾರು 1 ಲಕ್ಷ ಸಿಬ್ಬಂದಿ, 8.77 ಲಕ್ಷ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 9.77 ಲಕ್ಷ ಎನ್‌–95 ಮಾಸ್ಕ್‌ಗಳಿಗೆ ತಗುಲುವ ವೆಚ್ಚವನ್ನು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿಧಿಯಿಂದ ಭರಿಸಲು ಸರ್ಕಾರದ ಅನುಮತಿ ನೀಡಬೇಕು’ ಎಂದೂ ಇಲಾಖೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.