ADVERTISEMENT

ಅಂತರರಾಜ್ಯ ಆರೋಪಿ ಬಂಧನ; ₹ 16.41 ಲಕ್ಷ ಮೌಲ್ಯದ ಆಭರಣ ಜಪ್ತಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 17:30 IST
Last Updated 1 ಏಪ್ರಿಲ್ 2021, 17:30 IST
ಆರೋಪಿಯಿಂದ ಜಪ್ತಿ ಮಾಡಲಾದ ಆಭರಣ
ಆರೋಪಿಯಿಂದ ಜಪ್ತಿ ಮಾಡಲಾದ ಆಭರಣ   

ಬೆಂಗಳೂರು: ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಕಳ್ಳತನ ಎಸಗಿದ್ದ ಆರೋಪಿ ಬಸವರಾಜು ಪ್ರಕಾಶ್ (33) ಎಂಬಾತನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ತೆಲಂಗಾಣ ಮಲ್ಲಂಪೇಟೆಯ ಬಸವರಾಜು, ಇದುವರೆಗೂ 32 ಕಡೆ ಕಳ್ಳತನ ಎಸಗಿದ್ದ. ಆತನಿಂದ ₹ 16.41 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕೆಂಗೇರಿ ಠಾಣೆ ವ್ಯಾಪ್ತಿಯ ನಿವಾಸಿಯೊಬ್ಬರು, 2020ರ ಏಪ್ರಿಲ್ 8ರಂದು ರಾತ್ರಿ ಕತ್ತಿನಲ್ಲಿದ್ದ ಚಿನ್ನದ ಸರವನ್ನು ತೆಗೆದು ಕಿಟಕಿ ಬಳಿಯ ಕುರ್ಚಿ ಮೇಲಿಟ್ಟು ಮಲಗಿದ್ದರು. ಮರುದಿನ ಎದ್ದು ನೋಡಿದಾಗ ಚಿನ್ನದ ಸರವೇ ಇರಲಿಲ್ಲ. ಸರ ಕಳುವಾದ ಬಗ್ಗೆ ದೂರು ನೀಡಿದ್ದರು. ತನಿಖೆ ಕೈಗೊಂಡಾಗಲೇ ಆರೋಪಿ ಸಿಕ್ಕಿಬಿದ್ದ. ಆತನೇ ರಾತ್ರಿ ಕಿಟಕಿ ಬಳಿ ಬಂದು ಸರ ಕದ್ದಿರುವುದಾಗಿ ತಪ್ಪೊಪ್ಪಿಕೊಂಡ’ ಎಂದೂ ತಿಳಿಸಿದರು.

ADVERTISEMENT

‘ಆಗಾಗ ನಗರಕ್ಕೆ ಬರುತ್ತಿದ್ದ ಆರೋಪಿ, ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ. ನೆರೆ ರಾಜ್ಯಗಳಲ್ಲೂ ಈತ ಕೃತ್ಯ ಎಸಗಿದ್ದು ತನಿಖೆಯಿಂದ ತಿಳಿದುಬಂದಿದೆ’ ಎಂದೂ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.