ADVERTISEMENT

ಏ.5ಕ್ಕೆ ‘ಥೆರೇಸಮ್ಮ’ ಏಕವ್ಯಕ್ತಿ ರಂಗ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2024, 15:23 IST
Last Updated 29 ಮಾರ್ಚ್ 2024, 15:23 IST
ಹೆಲನ್ ಮೈಸೂರು
ಹೆಲನ್ ಮೈಸೂರು   

ಬೆಂಗಳೂರು: ರಂಗ ಬದುಕು ಟ್ರಸ್ಟ್ ಏ.5ರಂದು ಸಂಜೆ 4 ಗಂಟೆಗೆ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಹೆಲನ್ ಮೈಸೂರು ಅಭಿನಯದ ‘ಥೆರೇಸಮ್ಮ’ ಏಕವ್ಯಕ್ತಿ ರಂಗ ಪ್ರಯೋಗ ಹಮ್ಮಿಕೊಂಡಿದೆ. 

ಈ ನಾಟಕವನ್ನು ಬೇಲೂರು ರಘುನಂದನ್ ರಚಿಸಿ, ನಿರ್ದೇಶಿಸಿದ್ದಾರೆ. ಹೆಲನ್ ಮೈಸೂರು ಅವರು ‘ವಾಲ್ಮೀಕಿ ರಾಮಾಯಣ’ ರಂಗ ಪ್ರಯೋಗದಲ್ಲಿ ಮೂರು ಗಂಟೆಗಳ ಅವಧಿಯಲ್ಲಿ 111 ಪಾತ್ರಗಳನ್ನು ನಿರ್ವಹಿಸಿ, ಮೂರು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದರು. ‌‌

‘ಮದರ್ ಥೆರೇಸಾ ಅವರ ನಿಸ್ವಾರ್ಥ ಸಮಾಜಸೇವೆಗೆ ನೋಬೆಲ್ ಶಾಂತಿ ಪ್ರಶಸ್ತಿ ಸಂದಿದೆ. ಭಾರತ ಸರ್ಕಾರವೂ ದೇಶದ ಅತ್ಯುನ್ನತ ಪ್ರಶಸ್ತಿಯಾದ ‘ಭಾರತರತ್ನ’ ನೀಡಿ ಗೌರವಿಸಿದೆ. ಅವರ ಬಗೆಗಿನ ನಾಟಕವನ್ನು ಕನ್ನಡದಲ್ಲಿ ಪ್ರಯೋಗ ಮಾಡಲಾಗುತ್ತಿದೆ’ ಎಂದು ಹೆಲನ್ ಮೈಸೂರು ತಿಳಿಸಿದ್ದಾರೆ. 

ADVERTISEMENT

ಪಾಸ್‌ಗಳಿಗೆ ಸಂಪರ್ಕ ಸಂಖ್ಯೆ: 8197137309 ಅಥವಾ 8088057919

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.