ಬೆಂಗಳೂರು: ಇದು ಹಗರಣಗಳ ಸರ್ಕಾರ. ಪರಿಶಿಷ್ಟರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಕಾರ್ಮಿಕರು ಎಲ್ಲರ ಹಣವೂ ಈ ಸರ್ಕಾರದಲ್ಲಿ ಲೂಟಿಯಾಗುತ್ತಿದೆ ಎಂದು ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ್ ವಿಧಾನಸಭೆಯಲ್ಲಿ ಗುರುವಾರ ವಾಗ್ದಾಳಿ ನಡೆಸಿದರು.
ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ವಾಲ್ಮೀಕಿ ನಿಗಮದ ಹಣ ಲೂಟಿಯಾಗಿದೆ. ಕಾರ್ಮಿಕ ಇಲಾಖೆಯಲ್ಲಿ ₹ 300 ಕೋಟಿ ಮೊತ್ತದ ಅಕ್ರಮ ನಡೆದಿದೆ’ ಎಂದರು.
‘ಧರೆ ಹತ್ತಿ ಉರಿದೊಡೆ ನಿಲಬಹುದೆ’ ಎಂಬ ಬಸವಣ್ಣನವರ ವಚನ ಉಲ್ಲೇಖಿಸಿದ ಬೆಲ್ಲದ್, ‘ಬೇಲಿಯೇ ಎದ್ದು ಹೊಲ ಮೇಯ್ದರೆ ಗತಿ ಏನಾಗಬೇಕು? ಚುನಾವಣೆಗೆ ಹಣ ಹೊಂದಿಸುವ ಒತ್ತಡದಲ್ಲಿ ಹಗರಣ ಮುಚ್ಚಿಹಾಕಲು ಇವರಿಗೆ ಸಮಯ ಸಿಗಲಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಪಿ. ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಳ್ಳದೇ ಇದ್ದಿದ್ದರೆ ಲಪಟಾಯಿಸಿದ ಮೊತ್ತಕ್ಕೆ ಬಿಲ್ ಸೃಷ್ಟಿಸಿ, ಹಗರಣ ಮುಚ್ಚಿಹಾಕುತ್ತಿದ್ದರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.