ADVERTISEMENT

‘ಮೀಸಲಾತಿ ವಿರೋಧಿಗಳೇ ಮೀಸಲಾತಿ ಕೇಳುತ್ತಾರೆ’

ಕರೀಗೌಡ ಬೀಚನಹಳ್ಳಿ ಅವರ ‘ಹೊತ್ತಿನ ಕಣ್ಣಿನ ಮಿಂಚು’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 20:54 IST
Last Updated 8 ಡಿಸೆಂಬರ್ 2021, 20:54 IST
ವಾಸುದೇವ ಚಾರಿಟಬಲ್ ಟ್ರಸ್ಟ್ ಮತ್ತು ಸಂಚಲನ ಸಂಸ್ಕೃತಿ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬರಗೂರು ರಾಮಚಂದ್ರಪ್ಪ ಅವರು (ಎಡದಿಂದ ಎರಡನೆಯವರು) ‘ಹೊತ್ತಿನ ಕಣ್ಣಿನ ಮಿಂಚು’ ಕೃತಿಯನ್ನು ಕುಸುಮಾ ಬೀಚನಹಳ್ಳಿ (ಬಲಗಡೆಯವರು) ಅವರಿಗೆ ಹಸ್ತಾಂತರಿಸಿದರು. (ಎಡದಿಂದ) ನಟರಾಜ ಹುಳಿಯಾರ್, ಅಗ್ರಹಾರ ಕೃಷ್ಣಮೂರ್ತಿ, ‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಮತ್ತು ಎಚ್. ದಂಡಪ್ಪ ಇದ್ದರು -- –ಪ್ರಜಾವಾಣಿ ಚಿತ್ರ
ವಾಸುದೇವ ಚಾರಿಟಬಲ್ ಟ್ರಸ್ಟ್ ಮತ್ತು ಸಂಚಲನ ಸಂಸ್ಕೃತಿ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬರಗೂರು ರಾಮಚಂದ್ರಪ್ಪ ಅವರು (ಎಡದಿಂದ ಎರಡನೆಯವರು) ‘ಹೊತ್ತಿನ ಕಣ್ಣಿನ ಮಿಂಚು’ ಕೃತಿಯನ್ನು ಕುಸುಮಾ ಬೀಚನಹಳ್ಳಿ (ಬಲಗಡೆಯವರು) ಅವರಿಗೆ ಹಸ್ತಾಂತರಿಸಿದರು. (ಎಡದಿಂದ) ನಟರಾಜ ಹುಳಿಯಾರ್, ಅಗ್ರಹಾರ ಕೃಷ್ಣಮೂರ್ತಿ, ‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಮತ್ತು ಎಚ್. ದಂಡಪ್ಪ ಇದ್ದರು -- –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಇತ್ತೀಚಿನ ವರ್ಷಗಳಲ್ಲಿ ಜಾತಿವಾದ ಎನ್ನುವುದು ಜಾತಿಯನ್ನು ಮೀರಿ ಆವರಿಸಿಕೊಂಡಿದೆ.ಮೀಸಲಾತಿ ವಿರೋಧಿಸುವವರೇ ಮೀಸಲಾತಿ ಕೇಳುತ್ತಿದ್ದಾರೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಬೇಸರ
ವ್ಯಕ್ತಪಡಿಸಿದರು.

ವಾಸುದೇವ ಚಾರಿಟಬಲ್ ಟ್ರಸ್ಟ್ ಹಾಗೂ ಸಂಚಲನ ಸಂಸ್ಕೃತಿ ವೇದಿಕೆ ನಗರದಲ್ಲಿ ಬುಧವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಲೇಖಕ ಕರೀಗೌಡ ಬೀಚನಹಳ್ಳಿ ಅವರ ‘ಹೊತ್ತಿನ ಕಣ್ಣಿನ ಮಿಂಚು’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

‘ಜಾತಿ ಎಂಬುದು ಈಗ ಸಾಮಾ ಜಿಕ ನೆಲೆಯಾಗಿ ಉಳಿದಿಲ್ಲ. ಬದಲಾಗಿ ಶ್ರೇಷ್ಠತೆ ಮತ್ತು ಕನಿಷ್ಠತೆಯನ್ನು ಹೇಳುತ್ತಾ ಹೋಗುತ್ತಿದೆ.ಜಾತಿ ಮತ್ತು ಧರ್ಮವು ಸಂಘರ್ಷ ಉಂಟು ಮಾಡಬಾರದು.ನಮ್ಮ ದೇಶಕ್ಕೆ ಜಾತಿ ಧರ್ಮ ಮೀರಿದ ಸೌಹಾರ್ದ ಬೇಕಿದೆ. ಜಾತಿ ವಾದದ ಜೈಲುಗಳು, ಧರ್ಮ ದ್ವೇಷದ ದ್ವೀಪಗಳಿಂದ ಹೊರಗಡೆ ಬರಬೇಕಾಗಿದೆ’ ಎಂದು ಅವರು ಹೇಳಿದರು.

ADVERTISEMENT

ವಿಮರ್ಶಕನಟರಾಜ ಹುಳಿಯಾರ್, ಮಾತನಾಡಿ, ‘ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಸಾವಿರಾರು ಕೋಟಿ ರೂಪಾಯಿ ಘೋಷಿಸಲಾಗುತ್ತದೆ. ಆದರೆ, ನಮ್ಮ ಹಳ್ಳಿಗಳ ಸ್ಥಿತಿ ಮಾತ್ರ ಸ್ವಲ್ಪವೂ ಬದಲಾಗುತ್ತಿಲ್ಲ. ಜನಪ್ರತಿನಿಧಿಗಳಿಗೆ ಗ್ರಾಮಗಳನ್ನು ನೋಡುವ ಕಣ್ಣುಗಳು ಇಲ್ಲವಾಗಿವೆ.ಕಥೆಗಾರ ಅಥವಾ ಕಥೆಗಾರ್ತಿ ಧ್ವನಿ ಇಲ್ಲದವರ ಧ್ವನಿಯಾಗಬೇಕು. ಕರೀಗೌಡ ಅವರರ ಕಥೆಗಳಲ್ಲಿ ಹಳ್ಳಿಯ
ಮುಗ್ಧತೆ ಕಾಣಬಹುದು’ ಎಂದು ತಿಳಿಸಿದರು.

ಚಿಂತಕ ಅಗ್ರಹಾರ ಕೃಷ್ಣಮೂರ್ತಿ, ‘ಕರೀಗೌಡರ ಮುಖ್ಯ ಕಾಳಜಿ ಗ್ರಾಮೀಣ ಬದುಕು‌. 1979ರಲ್ಲಿ ಅವರು ತಮ್ಮ ಮೊದಲ ಕಥೆಯನ್ನು ಪ್ರಕಟಿಸಿದರು. ಆಶಾವಾದ ಮತ್ತು ಭರವಸೆಯ ಸಂಯಮವನ್ನು ಅವರ ಕಥೆಗಳಲ್ಲಿ ನೋಡಬಹುದಾಗಿದೆ. ಅವರು ಯಾವುದೇ ಸಂದರ್ಭದಲ್ಲಿ ಸಿದ್ಧಾಂತದ ಹಿಂದೆ ಬಿದ್ದು ಮಾತನಾಡಿಲ್ಲ. ಬಡತನ, ಬಯಲು ಸೀಮೆಯಲ್ಲಿನದುಃಖ ದುಮ್ಮಾನಗಳನ್ನು ಕಥೆಗಳಲ್ಲಿ ಕಟ್ಟಿ
ಕೊಟ್ಟಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು

ಕೃತಿಯ ಬಗ್ಗೆ ಮಾತನಾಡಿದ‌ ವಿಮರ್ಶಕ ಎಚ್. ದಂಡಪ್ಪ, ‘ಕೃತಿಯು 40 ಕಥೆಗಳನ್ನು ಒಳಗೊಂಡಿದೆ. ಬಡತನ ವನ್ನೇ ವಿಷಯ ವಸ್ತುವಾಗಿರಿಸಿಕೊಂಡು ಕಥೆಗಳನ್ನು ಬರೆಯಲಾಗಿದೆ.ನೈತಿಕ ಅರಿವಿನ ತಿಳುವಳಿಕೆಗೆ ಈ ಕಥೆಗಳು ಸಹಕಾರಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.