ADVERTISEMENT

ಬೆಂಗಳೂರಲ್ಲಿ ಅನಧಿಕೃತ ವಾಸ: ಶ್ರೀಲಂಕಾದ ಮೂವರ ವಶ

ತಮಿಳುನಾಡಿನ ವ್ಯಕ್ತಿಯ ಸಹಾಯ ಪಡೆದು ನಗರಕ್ಕೆ ಬಂದಿದ್ದ ಮೂವರು

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 14:17 IST
Last Updated 29 ಸೆಪ್ಟೆಂಬರ್ 2025, 14:17 IST
ಜಯವರ್ಧನೆ  
ಜಯವರ್ಧನೆ     

ಬೆಂಗಳೂರು: ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅ‍ಪಾರ್ಟ್‌ಮೆಂಟ್‌ವೊಂದರಲ್ಲಿ ಅನಧಿಕೃತವಾಗಿ ನೆಲಸಿದ್ದ ಶ್ರೀಲಂಕಾದ ಮೂವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಐರೇಶ್‌ ಹಸಂಕ ಜಯವರ್ಧನೆ (31), ಸುಗತ್‌ ಸಮಿಂದು (46), ದಿಲೀಪಾ ಹರೀಶನ್‌ (35) ಎಂಬುವವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಬಾತ್ಮೀದಾರರು ನೀಡಿದ ಖಚಿತ ಮಾಹಿತಿ ಆಧರಿಸಿ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿ ಅನಧಿಕೃತವಾಗಿ ನೆಲಸಿದ್ದವರನ್ನು ವಶಕ್ಕೆ ಪಡೆದುಕೊಳ್ಳಲಾಯಿತು ಎಂದು ಪೊಲೀಸರು ಹೇಳಿದರು.

ADVERTISEMENT

ಶ್ರೀಲಂಕಾದ ಜಾಫ್ನಾದಿಂದ ದೋಣಿ ಮೂಲಕ ತಮಿಳುನಾಡಿಗೆ ಬಂದಿದ್ದ ಮೂವರು ಅಲ್ಲಿಂದ ರಾಮೇಶ್ವರಂಗೆ ಹೋಗಿದ್ದರು. ಸ್ಥಳೀಯ ವ್ಯಕ್ತಿಯ ಸಹಾಯ ಪಡೆದು ಬೆಂಗಳೂರಿಗೆ ಬಂದು, ದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ವಾಸವಿದ್ದರು. ಒಂದು ವರ್ಷದಿಂದ ಪಾಸ್​ಪೋರ್ಟ್​ ಮತ್ತು ವೀಸಾ ಇಲ್ಲದೆಯೇ ನಗರದಲ್ಲಿ ನೆಲಸಿದ್ದರು ಎಂದು ಮೂಲಗಳು ಹೇಳಿವೆ.

ವಿದೇಶಿಯರ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಮೂವರು ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

ಸುಗತ್‌ 
ಹರೀಶನ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.