ADVERTISEMENT

ಇಂದಿನಿಂದ ಛಾಯಾಚಿತ್ರ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2023, 23:48 IST
Last Updated 18 ಆಗಸ್ಟ್ 2023, 23:48 IST
ಚಿತ್ರ: ನಾಗೇಂದ್ರ ಮುತ್ಮುರ್ಡು
ಚಿತ್ರ: ನಾಗೇಂದ್ರ ಮುತ್ಮುರ್ಡು   

ಯೂಥ್‌ ಫೋಟೋಗ್ರಾಫಿಕ್ ಸೊಸೈಟಿ (yPS) ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ ಆಗಸ್ಟ್‌ 19ರಂದು ಛಾಯಾಚಿತ್ರ ಪ್ರದರ್ಶನ ಹಾಗೂ ಉಚಿತ ಕಾರ್ಯಾಗಾರವನ್ನು ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದೆ.

‘ಫ್ರೇಮ್ಸ್ 2023 - ವಿಷುಯಲ್ ವಾಯೇಜಸ್’ ಹೆಸರಿನಲ್ಲಿ ಯೂಥ್‌ ಫೋಟೋಗ್ರಾಫಿಕ್‌ ಸೊಸೈಟಿ ಸದಸ್ಯರು ತೆಗೆದ 20 x 30 ಇಂಚುಗಳ ಚೌಕಟ್ಟಿನಲ್ಲಿ ಮುದ್ರಿಸಲಾದ 72 ಕಲಾತ್ಮಕ ಚಿತ್ರಗಳ ಪ್ರದರ್ಶನ ನಡೆಯಲಿದೆ. 

ಆರ್‌. ಅನಂತಮೂರ್ತಿ ಅವರ ‘ಎನ್‌ಚಾಂಟಿಂಗ್‌ ಈಕ್ವೆಡಾರ್‌ ಮತ್ತು ಪೆರು’ ಅವರು  ‘ಈಕ್ವೆಡಾರ್‌ ಮತ್ತು ಪೆರುವಿನ ಮೋಡಿ ಮಾಡುವ ಪಕ್ಷಿಗಳ ಛಾಯಾಚಿತ್ರಗಳ ಪ್ರದರ್ಶನವೂ ಇರಲಿದೆ. 

ADVERTISEMENT

ಭಾವಚಿತ್ರಗಳನ್ನು ಸೆರೆಹಿಡಿಯಲು ಅಗತ್ಯವಿರುವ ಬೆಳಕಿನ ತಂತ್ರಗಳನ್ನು ಪ್ರದರ್ಶಿಸುವ ವಿಶೇಷ ಕಾರ್ಯಾಗಾರಕ್ಕೆ  ಎಚ್‌. ಸತೀಶ್‌ ಅವರು ನೇತೃತ್ವ ವಹಿಸಲಿದ್ದು, ಮಧ್ಯಾಹ್ನ 2 ಗಂಟೆಯಿಂದ ನಡೆಯಲಿದೆ.  ಮರುದಿನ ಬೆಳಿಗ್ಗೆ ಕುಟುಂಬದ ಭಾವಚಿತ್ರಗಳನ್ನು ಸೆರೆಹಿಡಿಯುವ ತಂತ್ರ ಕಲಿಸುವ ಪ್ರಾಯೋಗಿಕ ಕಮ್ಮಟ ನಡೆಯಲಿದ್ದು, ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. 

ಹೆಚ್ಚಿನ ವಿವರಗಳಿಗೆ ಗಿರೀಶ್‌ ಅನಂತಮೂರ್ತಿ:  9449006221  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.