ADVERTISEMENT

ಬೆಂಗಳೂರು: 10 ಮಂದಿಗೆ ‘ಟೊಟೊ ಪ್ರಶಸ್ತಿ’ ಪ್ರದಾನ

ಸ್ಪರ್ಧೆ ವಿಜೇತರಿಗೆ ತಲಾ ₹60 ಸಾವಿರ ನಗದು, ಸ್ಮರಣಿಕೆ ವಿತರಣೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2024, 17:50 IST
Last Updated 3 ಫೆಬ್ರುವರಿ 2024, 17:50 IST
<div class="paragraphs"><p>ನಗರದಲ್ಲಿ ಟೊಟೊ ಫಂಡ್ಸ್ ದಿ ಆರ್ಟ್ಸ್ ಆಯೋಜಿಸಿದ್ದ ಸಮಾರಂಭದಲ್ಲಿ (ಎಡದಿಂದ) ಅದೀಪ್ ದಾಸ್, ನಿಶಾ ತನ್ವರ್, ಕೋಯಿಕ್ಕೋಡ್‌ನ ಧೀರಜ್ ರಬ್ಬಾ, ಕಿನಾರಿ, ಅಮೃತ ರಾಮನಾಥ್, ಫೈಜ್ ಅಹಮದ್, ನವೀನ್ ತೇಜಸ್ವಿ, ಖುಷಿ ಬಾನು, ಆಕೃತಿ ಚಂದ್ರವಂಶಿ ಅವರಿಗೆ 20ನೇ ವರ್ಷದ ಟೊಟೊ ಪ್ರಶಸ್ತಿ ಪ್ರದಾನ ಮಾಡಲಾಯಿತು. </p></div>

ನಗರದಲ್ಲಿ ಟೊಟೊ ಫಂಡ್ಸ್ ದಿ ಆರ್ಟ್ಸ್ ಆಯೋಜಿಸಿದ್ದ ಸಮಾರಂಭದಲ್ಲಿ (ಎಡದಿಂದ) ಅದೀಪ್ ದಾಸ್, ನಿಶಾ ತನ್ವರ್, ಕೋಯಿಕ್ಕೋಡ್‌ನ ಧೀರಜ್ ರಬ್ಬಾ, ಕಿನಾರಿ, ಅಮೃತ ರಾಮನಾಥ್, ಫೈಜ್ ಅಹಮದ್, ನವೀನ್ ತೇಜಸ್ವಿ, ಖುಷಿ ಬಾನು, ಆಕೃತಿ ಚಂದ್ರವಂಶಿ ಅವರಿಗೆ 20ನೇ ವರ್ಷದ ಟೊಟೊ ಪ್ರಶಸ್ತಿ ಪ್ರದಾನ ಮಾಡಲಾಯಿತು.

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಟೊಟೊ ಫಂಡ್ಸ್ ದಿ ಆರ್ಟ್ಸ್’ನ (ಟಿಎಫ್‌ಎ) ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಹತ್ತು ಮಂದಿಗೆ 20ನೇ ವರ್ಷದ ‘ಟೊಟೊ ಪ್ರಶಸ್ತಿ–2024’ ಪ್ರದಾ‌ನ ಮಾಡಲಾಯಿತು.

ADVERTISEMENT

ದೊಮ್ಮಲೂರಿನಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ(ಬಿಐಸಿ)ದಲ್ಲಿ ಶನಿವಾರ ಸಮಾರಂಭ ನಡೆಯಿತು.

ಅಂಗೀರಸ್ ಟೊಟೊ ವೆಲಾನಿ ಅವರ ಸ್ಮರಣಾರ್ಥವಾಗಿ ಟಿಎಫ್‌ಎ 20 ವರ್ಷಗಳಿಂದ ಯುವ ಕಲಾವಿದರನ್ನು ಪ್ರೋತ್ಸಾಹಿಸಲು ವಿವಿಧ ಸ್ಪರ್ಧೆ ಆಯೋಜಿಸುತ್ತಿದೆ. ಈ ಬಾರಿ ಸಂಗೀತ ಸ್ಪರ್ಧೆಗೆ 259, ಡಿಜಿಟಲ್ ಆರ್ಟ್‌ಗೆ 38, ಕ್ರಿಯಾತ್ಮಕ ಬರಹ (ಇಂಗ್ಲಿಷ್‌)ಕ್ಕೆ 194, ಕ್ರಿಯಾತ್ಮಕ ಬರಹ (ಕನ್ನಡ)ಕ್ಕೆ 47, ಕಿರುಚಿತ್ರ ಸ್ಪರ್ಧೆಗೆ 130 ಹಾಗೂ ಫೋಟೋಗ್ರಫಿ ಸ್ಪರ್ಧೆಗೆ 91 ಮಂದಿ ದೇಶದ ನಾನಾ ಭಾಗದಿಂದ ಪಾಲ್ಗೊಂಡಿದ್ದರು‌. 30 ವರ್ಷದ ಒಳಗಿನವರಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು.

ಅಂತಿಮ ಸುತ್ತಿಗೆ ತಲಾ ನಾಲ್ವರು ಸ್ಪರ್ಧಿಗಳನ್ನು ತೀರ್ಪುಗಾರರು ಆಯ್ಕೆ ಮಾಡಿದ್ದರು. ನಾಮನಿರ್ದೇಶನಗೊಂಡ ಸ್ಪರ್ಧಿಗಳ ಫೋಟೊಗಳು, ಕಿರುಚಿತ್ರಗಳನ್ನು ಇದೇ ವೇಳೆ ಪ್ರದರ್ಶಿಸಲಾಯಿತು. ಕೊನೆಯಲ್ಲಿ ಸಭಿಕರ ಎದುರು ವಿಜೇತರ ಹೆಸರು ಘೋಷಣೆ ಮಾಡಲಾಯಿತು.

ಹತ್ತು ಮಂದಿಗೆ ತಲಾ ₹60 ಸಾವಿರ ಹಾಗೂ ನಾಮನಿರ್ದೇಶನಗೊಂಡ 12 ಮಂದಿಗೆ ತಲಾ ₹15 ಸಾವಿರ ನಗದು ಬಹುಮಾನ ಹಾಗೂ ಸ್ಮರಣಿಕೆ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ನವೀನ್ ತೇಜಸ್ವಿ ಮಾತನಾಡಿ, ‘ಹಿಂದುಳಿದ ಸಮುದಾಯದಿಂದ ಬಂದ ಯಾರೇ ಗೆದ್ದರೂ ಅದು ಅವರ ವೈಯಕ್ತಿಕ ಗೆಲುವು ಆಗಿರುವುದಿಲ್ಲ. ಅದು ಸಮುದಾಯ ಗೆಲುವು ಆಗಿರಲಿದೆ’ ಎಂದು ಹೇಳಿದರು. ಪುರಸ್ಕಾರ ಪಡೆದ ಇತರರು ಸಂಭ್ರಮ ಹಂಚಿಕೊಂಡರು.

ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ವಕ್ತಾರ ಆಕಾರ್ ಪಟೇಲ್ ಮಾತನಾಡಿ, ‘ಈ ಸ್ಪರ್ಧೆ ಗಮನಿಸಿದರೆ ಭವಿಷ್ಯದಲ್ಲಿ ಅತ್ಯುತ್ತಮ ಕಲಾವಿದರು ಬರುತ್ತಾರೆ. ಸ್ಪರ್ಧೆ ಸಹ ಗುಣಮಟ್ಟದಿಂದ ಕೂಡಿದೆ’ ಎಂದು ಹೇಳಿದರು.

‘ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕಲೆಗಳ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಿದೆ’ ಎಂದು ಹೇಳಿದರು.

ಟಿಎಫ್‌ಎನ ಸ್ಥಾಪಕ ಟ್ರಸ್ಟಿ ಸರಿತಾ ವೆಲಾನಿ ಹಾಗೂ ಟಿಎಫ್‌ಎ ಮುಖ್ಯಸ್ಥೆ ಸಿ.ಕೆ.ಮೀನಾ ಪಾಲ್ಗೊಂಡಿದ್ದರು.

ವಿಜೇತರ ವಿವರ ಸಂಗೀತ: ಚೆನ್ನೈನ ಅಮೃತ ರಾಮನಾಥ್ ಹಾಗೂ ದೆಹಲಿಯ ಕಿನಾರಿ. ಡಿಜಿಟಲ್ ಆರ್ಟ್ಸ್: ಗುರುಗ್ರಾಮದ ನಿಶಾ ತನ್ವರ್. ಕ್ರಿಯಾತ್ಮಕ ಬರಹ (ಇಂಗ್ಲಿಷ್): ಕೇರಳದ ಕೋಯಿಕ್ಕೋಡ್‌ನ ಜೈನಬ್‌ ಉಮೇರ್ ಫಾರೂಕ್ ಹಾಗೂ ಮುಂಬೈನ‌ ಫೈಜ್ ಅಹಮದ್. ಕ್ರಿಯಾತ್ಮಕ ಬರಹ (ಕನ್ನಡ): ಶಿವಮೊಗ್ಗದ ಹೊಸಬಾಳೆ ನವೀನ್ ತೇಜಸ್ವಿ. ಫೋಟೊಗ್ರಫಿ: ಅಸ್ಸಾಂನ ಧೀರಜ್ ರಬ್ಬಾ ಹಾಗೂ ಪುಣೆಯ ಆಕೃತಿ ಚಂದ್ರವಂಶಿ. ಕಿರುಚಿತ್ರ: ದೆಹಲಿಯ ಅದೀಪ್ ದಾಸ್ ಹಾಗೂ ಲಖನೌದ ಖುಷಿ ಬಾನು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.