ADVERTISEMENT

ಮಾದರಿ ಪಾರಂಪರಿಕ ಗ್ರಾಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 21:58 IST
Last Updated 13 ನವೆಂಬರ್ 2020, 21:58 IST
ಜಕ್ಕೂರಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ನಿರ್ಮಿಸಿರುವ ಮಾದರಿ ಪಾರಂಪರಿಕ ಗ್ರಾಮದ ನೋಟ –ಪ್ರಜಾವಾಣಿ ಚಿತ್ರ
ಜಕ್ಕೂರಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ನಿರ್ಮಿಸಿರುವ ಮಾದರಿ ಪಾರಂಪರಿಕ ಗ್ರಾಮದ ನೋಟ –ಪ್ರಜಾವಾಣಿ ಚಿತ್ರ   

ಯಲಹಂಕ: ಜಕ್ಕೂರು ಸಮೀಪದ ಶ್ರೀರಾಮಪುರ ಕ್ರಾಸ್‌ನಲ್ಲಿರುವ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ಆವರಣದಲ್ಲಿ ಡಾ.ಟಿ.ಬಿ.ಸೊಲಬಕ್ಕನವರ ಕಲೆ ಮತ್ತು ಕಲ್ಪನೆಯಡಿ ನಿರ್ಮಿಸಿರುವ ಮಾದರಿ ಪಾರಂಪರಿಕ ಗ್ರಾಮದಲ್ಲಿ ಹಳ್ಳಿಯ ಬದುಕು ಅನಾವರಣಗೊಂಡಿದೆ.

ಗ್ರಾಮದಲ್ಲಿರುವ ಅಗಸಿ ಬಾಗಿಲು, ಒಕ್ಕಲಿಗರ ಮನೆ, ಹಳ್ಳಿ ವೈದ್ಯೆ, ಕಿರಾಣಿ ಅಂಗಡಿ, ಪಂಚಾಯ್ತಿಕಟ್ಟೆ, ದೇಶಿ ಕುಸ್ತಿ... ಹೀಗೆ ಇನ್ನೂ ಅನೇಕ ಕಲಾಕೃತಿಗಳ ಮಾದರಿಗಳನ್ನು ಒಂದೇ ಸೂರಿನಡಿ ವೀಕ್ಷಿಸಿ, ಕಣ್ತುಂಬಿಕೊಳ್ಳಬಹುದು.

ಮಾದರಿ ಪಾರಂಪರಿಕ ಗ್ರಾಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ‘ರಾಜ್ಯದ ಎಲ್ಲಾ ಜಿಲ್ಲೆಗಳ ಸಂಸ್ಕೃತಿ, ಭಾಷಾ ವೈವಿಧ್ಯ, ವೇಷಭೂಷಣ ಪರಿಚಯಿಸುವ ರಾಜ್ಯದ ಮೊಟ್ಟಮೊದಲ ಕಲಾಕೇಂದ್ರ ಇದಾಗಿದ್ದು, ಈ ಗ್ರಾಮವನ್ನು ₹11.68 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ’ ಎಂದರು.

ADVERTISEMENT

ಶಾಸಕ ಕೃಷ್ಣಬೈರೇಗೌಡ ಮಾತನಾಡಿ, ‘ಹಿಂದೆ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಎಚ್.ಕೆ.ಪಾಟೀಲ ಅವರು, ಈ ಮಾದರಿ ಗ್ರಾಮವನ್ನು ಬೆಂಗಳೂರಿನಲ್ಲಿ ನಿರ್ಮಿಸಲು ₹ 5 ಕೋಟಿ ಅನುದಾನ ನೀಡಿ ಶಂಕುಸ್ಥಾಪನೆ ನೆರವೇರಿಸಿದ್ದರು’ ಎಂದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.