ADVERTISEMENT

10.62 ಲಕ್ಷ ಪ್ರಕರಣ ಇತ್ಯರ್ಥ: ₹ 30.96 ಕೋಟಿ ದಂಡ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 4:07 IST
Last Updated 7 ಫೆಬ್ರುವರಿ 2023, 4:07 IST
ಹಲವು ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ ಸವಾರರೊಬ್ಬರಿಂದ ಸೋಮವಾರ ದಂಡ ಕಟ್ಟಿಸಿಕೊಂಡ ಪುಲಿಕೇಶಿನಗರ ಸಂಚಾರ ಠಾಣೆ ಪೊಲೀಸರು ರಶೀದಿ ನೀಡಿದರು
ಹಲವು ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ ಸವಾರರೊಬ್ಬರಿಂದ ಸೋಮವಾರ ದಂಡ ಕಟ್ಟಿಸಿಕೊಂಡ ಪುಲಿಕೇಶಿನಗರ ಸಂಚಾರ ಠಾಣೆ ಪೊಲೀಸರು ರಶೀದಿ ನೀಡಿದರು   

ಬೆಂಗಳೂರು: ಶೇ 50ರಷ್ಟು ರಿಯಾಯಿತಿ ಆದೇಶಕ್ಕೆ ಮೊದಲ ದಿನದಿಂದಲೇ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಾಲ್ಕು ದಿನಗಳಲ್ಲಿ ₹ 30.96 ಕೋಟಿ ದಂಡ ಸಂಗ್ರಹವಾಗಿದೆ. 10.62 ಲಕ್ಷ ಪ್ರಕರಣಗಳು ಇತ್ಯರ್ಥವಾಗಿವೆ.

ಸೋಮವಾರ ಒಂದೇ ದಿನದಲ್ಲಿ 2.59 ಲಕ್ಷ ಪ್ರಕರಣ ಇತ್ಯರ್ಥಗೊಂಡಿವೆ. ₹ 7.45 ಕೋಟಿ ದಂಡ ಸಂಗ್ರಹವಾಗಿದೆ.

ಇನ್ಫೆಂಟ್ರಿ ರಸ್ತೆಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರ (ಟಿಎಂಸಿ), ನಗರದ ಸಂಚಾರ ಪೊಲೀಸ್ ಠಾಣೆಗಳು ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ಜನರು ದಂಡ ಪಾವತಿಸಿದ್ದಾರೆ. ಹೆಚ್ಚಿನ ಜನರು, ಪೇಟಿಎಂ ಆ್ಯಪ್‌ ಮೂಲಕ ದಂಡ ಕಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.