ADVERTISEMENT

99 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ ಬೈಕ್‌ ಸವಾರ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2023, 0:15 IST
Last Updated 28 ಸೆಪ್ಟೆಂಬರ್ 2023, 0:15 IST
ಬಂಧನ (ಸಾಂದರ್ಭಿಕ ಚಿತ್ರ)
ಬಂಧನ (ಸಾಂದರ್ಭಿಕ ಚಿತ್ರ)   

ಬೆಂಗಳೂರು: 99 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ಬೈಕ್‌ ಸವಾರನನ್ನು ಮೈಕ್ರೊ ಲೇಔಟ್‌ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸುತ್ತಿದ್ದ ಬಿಳೆಕಲ್ಲಹಳ್ಳಿಯ ಹಸನ್‌ ₹ 56 ಸಾವಿರ ದಂಡ ಪಾವತಿಸಬೇಕಿತ್ತು.

ಹಸನ್‌ ತಮ್ಮ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್‌ ಇಲ್ಲದೇ ಪ್ರಯಾಣಿಸುತ್ತಿದ್ದ. ಸಿಗ್ನಲ್‌ಗಳಲ್ಲೂ ನಿಯಮ ಪಾಲನೆ ಮಾಡುತ್ತಿರಲಿಲ್ಲ. ದಂಡ ಪಾವತಿಸುವಂತೆ ನೋಟಿಸ್‌ ಕಳುಹಿಸಿದ್ದರೂ ಪಾವತಿ ಮಾಡಿರಲಿಲ್ಲ.

ADVERTISEMENT

‘ಕಳೆದ ವಾರ ಹೆಲ್ಮೆಟ್‌ ಇಲ್ಲದೆ ಏಕಮುಖ ಸಂಚಾರ ರಸ್ತೆಯಲ್ಲಿ ಬೈಕ್‌ ಸವಾರಿ ಮಾಡುತ್ತಿದ್ದ. ಕಾರಿನ ಡ್ಯಾಶ್‌ಬೋರ್ಡ್‌ ಕ್ಯಾಮೆರಾದಲ್ಲಿ ಸೆರೆ ಹಿಡಿದ ದೃಶ್ಯವನ್ನು ಚಾಲಕರೊಬ್ಬರು ಪೊಲೀಸ್‌ ಮಹಾನಿರ್ದೇಶಕರ ‘ಎಕ್ಸ್‌’ ಖಾತೆಗೆ ಟ್ಯಾಗ್‌ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದರು. ಪೊಲೀಸ್‌ ಮಹಾನಿರ್ದೇಶಕರ ಸೂಚನೆಯಂತೆ ಸಂಚಾರ ಪೊಲೀಸರು ಆತನನ್ನು ಪತ್ತೆಹಚ್ಚಿದ್ದರು. ಆತ 99 ಬಾರಿ ಸಂಚಾರ ನಿಯಮ ಉಲ್ಲಂಘಿಸಿರುವುದು ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.