ADVERTISEMENT

ಟ್ರಾವೆಲ್‌ ಏಜೆನ್ಸಿಯಿಂದ ವಂಚನೆ: ದೂರು

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 20:40 IST
Last Updated 3 ಜುಲೈ 2019, 20:40 IST

ಬೆಂಗಳೂರು: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಅಂತರರಾಷ್ಟ್ರೀಯ ರೊಬೋಟಿಕ್‌ ಸ್ಪರ್ಧೆಯಲ್ಲಿ ಭಾಗವಹಿಸಲು ಸಿದ್ಧತೆ ನಡೆಸುತ್ತಿದ್ದ ನಗರದ 10 ಪ್ರೌಢ ಶಾಲಾ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ಮುಂಬೈ ಮೂಲದ ಟ್ರಾವೆಲ್‌ ಏಜೆನ್ಸಿ ಮತ್ತು ಸಿಬ್ಬಂದಿ ವಂಚಿಸಿದ ಬಗ್ಗೆ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ವೀಸಾ ಮತ್ತು ಟಿಕೆಟ್‌ ಮಾಡಿಸಿಕೊಡುವ ಭರವಸೆ ನೀಡಿ ಟ್ರಾವೆಲ್‌ ಏಜೆನ್ಸಿ ₹17 ಲಕ್ಷ ಪಡೆದುಕೊಂಡಿದ್ದು, ನಕಲಿ ವೀಸಾ ಮತ್ತು ಟಿಕೆಟ್‌ ನೀಡಿರುವ ಬಗ್ಗೆ ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಡಿಸೈರ್‌ ಹಾಲಿಡೇ ಟ್ರಾವೆಲ್‌ ಏಜೆನ್ಸಿ ಮತ್ತು ಸೇಲ್ಸ್ ಮ್ಯಾನೇಜರ್‌ ಗೋಪಿನಾಥ್‌ ಎಂಬವರ ವಿರುದ್ಧ ತಲಘಟ್ಟಪುರ, ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಗಳಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ.ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ವೀಸಾ ಮತ್ತು ಟಿಕೆಟ್‌ಗೆ ಈ ವಿದ್ಯಾರ್ಥಿಗಳ ಪೋಷಕರು ಪರ್ಯಾಯ ವ್ಯವಸ್ಥೆ ಮಾಡಿದ್ದರಿಂದ ಸಿಡ್ನಿಗೆ ತೆರಳಲು ಸಾಧ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT