ADVERTISEMENT

ಚೆಕ್‌ಪೋಸ್ಟ್‌ ಮೇಲೆ ಉರುಳಿದ ರೆಂಬೆ

​ಪ್ರಜಾವಾಣಿ ವಾರ್ತೆ
Published 31 ಮೇ 2021, 2:36 IST
Last Updated 31 ಮೇ 2021, 2:36 IST

ಬೆಂಗಳೂರು: ತಾತ್ಕಾಲಿಕ ಚೆಕ್‌ಪೋಸ್ಟ್‌ ಮೇಲೆ ಮರದ ರೆಂಬೆ ಉರುಳಿದ ಪರಿಣಾಮ ಪೊಲೀಸ್ ಸಿಬ್ಬಂದಿ ಗಾಯಗೊಂಡಿರುವ ಘಟನೆ ನೈಸ್‌ ರಸ್ತೆಯ ಬಳಿ ಭಾನುವಾರ ನಡೆದಿದೆ.

ಲಾಕ್‌ಡೌನ್ ಇರುವುದರಿಂದ ನೈಸ್‌ ರಸ್ತೆಯಲ್ಲಿರುವ ಮಾವಿನ ಮರದ ಕೆಳಗೆ ಚೆಕ್‌ಪೋಸ್ಟ್‌ವೊಂದನ್ನು ತಾತ್ಕಾಲಿಕವಾಗಿ ತೆರೆಯಲಾಗಿತ್ತು. ಗಾಳಿಯ ರಭಸಕ್ಕೆ ಮರದ ರೆಂಬೆಯೊಂದು ಚೆಕ್‌ಪೋಸ್ಟ್‌ ಮೇಲೆ ಬಿದ್ದಿದೆ.

‘ಈ ವೇಳೆ ಗೃಹರಕ್ಷಕ ಸಿಬ್ಬಂದಿ ಮಹೇಶ್ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.