ADVERTISEMENT

ಟ್ರಯಾಜ್ ಸೆಂಟರ್ ನಿರ್ಮಿಸಿದ ರೋಟರಿ ಕ್ಲಬ್

​ಪ್ರಜಾವಾಣಿ ವಾರ್ತೆ
Published 19 ಮೇ 2021, 17:11 IST
Last Updated 19 ಮೇ 2021, 17:11 IST
ರೋಟರಿ ಮುತ್ತಪ್ಪ ಅತ್ತಾವರ್ ಟ್ರಯಾಜ್ ಸೆಂಟರ್
ರೋಟರಿ ಮುತ್ತಪ್ಪ ಅತ್ತಾವರ್ ಟ್ರಯಾಜ್ ಸೆಂಟರ್   

ಬೆಂಗಳೂರು: ಬಿಬಿಎಂಪಿ ಸಹಯೋಗದಲ್ಲಿ ರೋಟರಿ ರಾಜರಾಜೇಶ್ವರಿನಗರ ಕ್ಲಬ್‌ ಟ್ರಯಾಜ್ ಸೆಂಟರ್‌ ಪ್ರಾರಂಭಿಸಿದೆ.

ರಾಜರಾಜೇಶ್ವರಿನಗರದಲ್ಲಿರುವ ರೋಟರಿ ಮುತ್ತಪ್ಪ ಅತ್ತಾವರ್ ಆಸ್ಪತ್ರೆಯನ್ನೇ ಟ್ರಯಾಜ್ ಸೆಂಟರ್‌ ಆಗಿ ಮಾರ್ಪಡಿಸಲಾಗಿದೆ. ಇಬ್ಬರು ವೈದ್ಯರು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದಿನದ 24 ಗಂಟೆಯೂ ವೈದ್ಯಕೀಯ ಸೇವೆಗಳು ದೊರೆಯಲಿವೆ. ಚಿಕಿತ್ಸೆ ಹಾಗೂ ಔಷಧವನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ. ಐದು ಹಾಸಿಗೆಗಳಿದ್ದು, ಆಮ್ಲಜನಕ ಸಾಂದ್ರಕ ಸಾಧನಗಳನ್ನು ಕೂಡ ಇರಿಸಿಕೊಳ್ಳಲಾಗಿದೆ.

‘ಸೋಂಕಿತರೆಲ್ಲರೂ ಆಸ್ಪತ್ರೆಗೆ ದಾಖಲಾದರೆ ತುರ್ತಾಗಿ ಚಿಕಿತ್ಸೆ ಅಗತ್ಯ ಇರುವವರಿಗೆ ಹಾಸಿಗೆ ಸಮಸ್ಯೆಯಾಗಲಿದೆ. ಅದೇ ರೀತಿ, ಸೋಂಕು ಶಂಕಿತ ವ್ಯಕ್ತಿ ಮಾದರಿ ನೀಡಿದ ಬಳಿಕ ವರದಿ ಬರುವವರೆಗೆ ಹೊರಗಡೆ ಓಡಾಟ ನಡೆಸುವ ಸಾಧ್ಯತೆ ಇರುತ್ತದೆ. ಇದಕ್ಕೆ ಟ್ರಯಾಜ್ ಕೇಂದ್ರ ಪರಿಹಾರ ಒದಗಿಸುತ್ತದೆ. ವ್ಯಕ್ತಿಯನ್ನು ಮೌಲ್ಯಮಾಪನ ಮಾಡಿದ ಬಳಿಕ ಎಲ್ಲಿಗೆ ಕಳುಹಿಸಬೇಕು ಎನ್ನುವುದನ್ನು ವೈದ್ಯರು ನಿರ್ಧರಿಸಿ, ಶಿಫಾರಸು ಮಾಡುತ್ತಾರೆ’ ಎಂದು ಕ್ಲಬ್‌ನ ಸಮುದಾಯ ಸೇವೆ ವಿಭಾಗದ ನಿರ್ದೇಶಕ ಎ.ಆರ್‌.ಸಿ ಸಿಂಧ್ಯಾ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.