ಬೆಂಗಳೂರು: ತ್ರಿವಳಿ ತಲಾಖ್ ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಹಿರಿಯ ಸಾಹಿತಿ ಡಾ.ಎಂ.ಚಿದಾನಂದ ಮೂರ್ತಿ ಸ್ವಾಗತಿಸಿದ್ದಾರೆ.
‘ನಿಷೇಧದ ಕಾನೂನಿನಿಂದ ಮುಸ್ಲಿಂ ಮಹಿಳೆಯರಿಗೆ ಆಗಿದ್ದ ಅನ್ಯಾಯ ತೊಡೆದುಹಾಕುತ್ತದೆ. ಬಹುಪತ್ನಿತ್ವ ಹಕ್ಕನ್ನು ನಿವಾರಿಸುತ್ತದೆ ಹಾಗೂ ಭಾರತದ ಸಂವಿಧಾನಕ್ಕೆ ಅನುಗುಣವಾಗಿ ಹಿಂದೂ, ಕ್ರೈಸ್ತ ಮಹಿಳೆಯರಿಗೆ ಇರುವ ಸ್ಥಾನಮಾನವನ್ನು ಮುಸ್ಲಿಂ ಮಹಿಳೆಯರಿಗೂ ನೀಡಿದೆ’ ಎಂದು ಅವರು ಪ್ರಕಟಣೆಯಲ್ಲಿ ಇಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.