ADVERTISEMENT

ತುಪಾಕಿ ಪಿಸುಮಾತು ಕಾದಂಬರಿ ಜನಾರ್ಪಣೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 19:17 IST
Last Updated 17 ಸೆಪ್ಟೆಂಬರ್ 2025, 19:17 IST
<div class="paragraphs"><p>ಸಾದರ ಸ್ವೀಕಾರ</p></div>

ಸಾದರ ಸ್ವೀಕಾರ

   

ಬೆಂಗಳೂರು: ಲೇಖಕ ಕೆ. ಎಲ್. ವಿನೋದ್ ಅವರ ಎರಡನೇ ಕಾದಂಬರಿ ತುಪಾಕಿಯ ಪಿಸುಮಾತು ಬುಧವಾರ ಚಿತ್ರಕಲಾ ಪರಿಷತ್‌ನಲ್ಲಿ ಜನಾರ್ಪಣೆಗೊಂಡಿತು.

ಕಾದಂಬರಿ ಬಿಡುಗಡೆ ಮಾಡಿದ ಲೇಖಕಿ ಡಾ. ಧರಣಿದೇವಿ ಮಾಲಗತ್ತಿ ಮಾತನಾಡಿ,  ‘ದಲಿತ ಸಾಹಿತ್ಯಕ್ಕೆ ಅರ್ಧ ಶತಮಾನಗಳ ಇತಿಹಾಸವಿದೆ. ಮರಾಠಿಯಲ್ಲಿ ಆತ್ಮಕಥೆಯೇ ಮೊದಲ ಕೃತಿಯಾಗಿ ಬಂದು ವಿಮರ್ಶೆಗೂ ಒಳಪಟ್ಟಿತ್ತು. ಅಲ್ಲಿನ ಅನುಭವ, ವಿಷಯ, ವಿಶಿಷ್ಟವಾಗಿಯೂ, ತೀಕ್ಷ್ಣವಾಗಿಯೂ ಜನರನ್ನು ತಟ್ಟಿತ್ತು. ದಲಿತ ಸಾಹಿತ್ಯದಲ್ಲಿ ಈವರೆಗೆ ಏನು ಬಂತೋ ಅದಕ್ಕಿಂತ ಮುಂದೆ ಹೋಗಿ ಪ್ರಶ್ನಿಸುವ ಗುಣ ವಿನೋದ್ ಅವರ ಕಾದಂಬರಿಯಲ್ಲಿ ಕಾಣಬಹುದು ́ ಎಂದರು.

ADVERTISEMENT

ಕಾದಂಬರಿಯ ಕರ್ತೃ ವಿನೋದ್ ಮಾತನಾಡಿ, ‘ಸತ್ಯವನ್ನು ಮಾತಾಡುವ ಲೇಖನಿಯ ವಿರುದ್ಧ ತುಪಾಕಿ ಪಿಸುಗುಡುತ್ತದೆ. ಇದು ಕಾದಂಬರಿಯ ಮುಖ್ಯ ಎಳೆ. ಈ ಕಾದಂಬರಿಯನ್ನು 2018 ರಲ್ಲೇ ಬರೆದಿದ್ದು ಈಗ ಬಿಡುಗಡೆ ಆಗುತ್ತಿದೆ ́ಎಂದರು.

ಲೇಖಕ ಪ್ರಕಾಶ್ ರಾಜ್ ಮೇಹು ಅವರು ಕಾದಂಬರಿ ಕುರಿತು ಮಾತನಾಡಿದರು. ಬೆಂಗಳೂರು ವಿಶ್ವವಿದ್ಯಾಲಯ ರಾಮನಗರ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು. ಕೊ. ಪ್ರಕಾಶನದ ಸುರೇಶ್, ಲೇಖಕಿಯರಾದ ಕೆ .ಷರೀಫ, ದು. ಸರಸ್ವತಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.