ADVERTISEMENT

'ಕುಮಾರವ್ಯಾಸ ಭಾರತ ಎಂಬ ಕರ್ಣಾಟ ಭಾರತ ಕಥಾಮಂಜರಿ' ಪುಸ್ತಕ ಲೋಕಾರ್ಪಣೆ

ಡಾ.ಟಿ. ವಿ. ವೆಂಕಟಾಚಲಶಾಸ್ತ್ರೀ ಪ್ರಧಾನ ಸಂಪಾದಕತ್ವ: ಕೆಜಿಪಿಯಿಂದ ಪ್ರಕಟ

​ಪ್ರಜಾವಾಣಿ ವಾರ್ತೆ
Published 9 ಮೇ 2022, 2:55 IST
Last Updated 9 ಮೇ 2022, 2:55 IST
‘ಕುಮಾರವ್ಯಾಸ ಭಾರತ ಎಂಬ ಕರ್ಣಾಟ ಭಾರತ ಕಥಾ ಮಂಜರಿ’ ಕೃತಿಗಳನ್ನು ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ (ಎಡದಿಂದ ನಾಲ್ಕನೆಯವರು) ಬಿಡುಗಡೆಗೊಳಿಸಿದರು. ಪುಣೆಯ ನಿವೃತ್ತ ರಸಾಯನವಿಜ್ಞಾನ ಪ್ರಾಧ್ಯಾಪಕ ಪ್ರೊ. ಜಿ.ಸಿ.ಕುಲಕರ್ಣಿ, ಕೃತಿಯ ಪ್ರಧಾನ ಸಂಪಾದಕ ಡಾ.ಟಿ.ವಿ. ವೆಂಕಟಾಚಲ ಶಾಸ್ತ್ರಿ, ಪ್ರೊ. ಅ.ರಾ. ಮಿತ್ರ, ನಿವೃತ್ತ ಕನ್ನಡ ಪ್ರಾಧ್ಯಾಪಕ ಪಿ.ವಿ. ನಾರಾಯಣ ಮತ್ತು ಸಂಪಾದಕ ಮಂಡಳಿ ಸದಸ್ಯ ಎ.ವಿ. ಪ್ರಸನ್ನ ಇದ್ದಾರೆ  – ಪ್ರಜಾವಾಣಿ ಚಿತ್ರ

ಬೆಂಗಳೂರು: 'ಕುಮಾರವ್ಯಾಸ ಭಾರತ ಎಂಬ ಕರ್ಣಾಟ ಭಾರತ ಕಥಾಮಂಜರಿ' ಕೃತಿಯ ಪರಿಷ್ಕೃತ ಸಂಪುಟ ಹಲವು ಹೊಸ ವಿಚಾರಗಳ ಕಣಜ. ಕನ್ನಡದಲ್ಲಿ ಇದುವರೆಗೆ ಯಾವ ಕವಿಯ ಬಗ್ಗೆಯೂ ಇಷ್ಟೊಂದು ವಿಸ್ತೃತವಾದ ಮಾಹಿತಿ
ಪ್ರಕಟವಾಗಿಲ್ಲ’ ಎಂದು ಕೃತಿಯ ಸಂಪಾದಕ ಮಂಡಳಿಯ ಸದಸ್ಯ ಡಾ.ಎ.ವಿ. ಪ್ರಸನ್ನ ವಿವರಿಸಿದರು.

ವಿದ್ವಾಂಸ ಡಾ.ಟಿ.ವಿ. ವೆಂಕಟಾಚಲಶಾಸ್ತ್ರೀ ಪ್ರಧಾನ ಸಂಪಾದಕತ್ವದಲ್ಲಿ ಕನ್ನಡ ಗಣಕ ಪರಿಷತ್ ಪ್ರಕಟಿಸಿರುವ 'ಕುಮಾರ ವ್ಯಾಸ ಭಾರತ ಎಂಬ ಕರ್ಣಾಟ ಭಾರತ ಕಥಾಮಂಜರಿ' ಕೃತಿಯ ಪರಿಷ್ಕೃತ ಸಂಪುಟಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘2012ರಲ್ಲಿ ಪರಿಷ್ಕೃತ ಸಂಪುಟಗಳ ಪ್ರಕಟಣೆಯನ್ನು ಆರಂಭಿಸಲಾಗಿದ್ದು, ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, 10 ವರ್ಷ ತೆಗೆದು ಕೊಂಡಿತು. ಸಂಪಾದಕ ಮಂಡಳಿಯು ಸುಮಾರು 300 ಸಭೆಗಳನ್ನು ನಡೆಸಿ ಪ್ರತಿಯೊಂದು ಪದ್ಯ, ಶಬ್ದ, ಅಕ್ಷರಗಳ ಬಗ್ಗೆಯೂ ಆಳವಾಗಿ ಚರ್ಚಿಸಿದೆ’ ಎಂದು ಪ್ರಸನ್ನ ವಿವರಿಸಿದರು.

ADVERTISEMENT

ವಿದ್ವಾಂಸ ಡಾ.ಟಿ.ವಿ. ವೆಂಕಟಾಚಲಶಾಸ್ತ್ರೀ, ‘ಕುವೆಂಪು ಮತ್ತು ಮಾಸ್ತಿ ಅವರು 1958ರಲ್ಲಿ ಕುಮಾರವ್ಯಾಸ ಮಹಾಕವಿಯ ಕರ್ಣಾಟ ಭಾರತ ಕಥಾಮಂಜರಿ ಸಂಪಾದಿಸಿದ್ದರು. ಆಗಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಈ ಸಂಪುಟಗಳ 40 ಸಾವಿರ ಪ್ರತಿಗಳ ಮುದ್ರಣಕ್ಕೆ ಒಪ್ಪಿಗೆ ನೀಡಿದ್ದರು. ಆಗ ಕೇವಲ ₹2 ದರ ನಿಗದಿಪಡಿಸಲಾಗಿತ್ತು. ಮುದ್ರಣದೋಷ, ಪದವಿಭಾಗದ ತಪ್ಪುಗಳನ್ನು ಸರಿಪಡಿಸಲಾಗಿದೆ. ಪ್ರತಿಪದ್ಯಕ್ಕೂ ಅಲ್ಲಲ್ಲೇ ಹೊಸಗನ್ನಡದಲ್ಲಿ ಗದ್ಯಾನುವಾದ ನೀಡಲಾಗಿದೆ. ಕ್ಷಿಷ್ಟಪದಗಳ ಅರ್ಥವನ್ನೂ ವಿವರಿಸಲಾಗಿದೆ’ ಎಂದರು.

ಗಣಕ ಪರಿಷತ್ತಿನ ಕಾರ್ಯದರ್ಶಿ ಜಿ.ಎನ್.ನರಸಿಂಹಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.